ಚಿಕ್ಕಮಗಳೂರು: ಆಕಸ್ಮಿಕವಾಗಿ ಮೂರು ಗುಡಿಸಲಿಗೆ ಬೆಂಕಿ ಬಿದ್ದಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ಪ್ರಾಣ ಲೆಕ್ಕಿಸದೆ ಇಬ್ಬರ ಜೀವ ಉಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ (Kadur Taluku) ಅಂತರಘಟ್ಟೆ ಹತ್ತಿರದ ಗುಮ್ಮನಹಳ್ಳಿಯ ಬೋವಿ ಕಾಲೋನಿಯಲ್ಲಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕಾಲೋನಿಯಲ್ಲಿದ್ದ ಶಶಿ, ಕಲ್ಲೇಶ್ ಹಾಗೂ ಹನುಮಂತ ಎಂಬುವವರ ಮೂರು ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಆಗ ಕಲ್ಲೇಶ್ ಮನೆಯಲ್ಲಿ 6 ವರ್ಷದ ಮಗು ಮಲಗಿತ್ತು. ಹನುಮಂತ ಕೂಡ ಮದ್ಯ ಸೇವಿಸಿ ಮನೆಯಲ್ಲಿಯೇ ಮಲಗಿದ್ದರು. ಬೆಂಕಿ ಹತ್ತುತ್ತಿದ್ದಂತೆ ಧಗಧಗ ಉರಿದಿದೆ. ಕೂಡಲೇ ಗ್ರಾಮದಲ್ಲಿದ್ದ ಮಹಿಳೆಯರು ತಮ್ಮ ಜೀವ ಲೆಕ್ಕಿಸದೆ ಮಗು ಹಾಗೂ ಮದ್ಯ ಸೇವಿಸಿ ಮಲಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದವರು ಮರಳಿ ಬಂದಿದ್ದಾರೆ. ಮನೆಗಳ ಪಕ್ಕದಲ್ಲಿದ್ದ ತೊಟ್ಟಿಯಲ್ಲಿ ಪೂರ್ತಿ ನೀರಿದ್ದ ಕಾರಣ ಎಲ್ಲರೂ ಸೇರಿ ಬೆಂಕಿ ನಂದಿಸಿದ್ದಾರೆ. ಆದರೆ ಎರಡು ಮನೆಗಳು ಸಂಪೂರ್ಣ ಸುಟ್ಟು ಹೋಗಿ, ಒಂದು ಮನೆ ಭಾಗಶಃ ಸುಟ್ಟಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ. ಈ ಸಂಬಂಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








