JDS ಅಭ್ಯರ್ಥಿಗಳ ಮೊದಲ ಪಟ್ಟಿಯೇ ಫೈನಲ್ ಅಲ್ಲ – H D ಕುಮಾರಸ್ವಾಮಿ…
ಈಗ ಘೋಷಿಸಿರುವ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯೇ ಫೈನಲ್ ಅಲ್ಲ ಜನರ ಬಳಿ ಹೋಗಿ ಯಾರು ವಿಶ್ವಾಸ ಗಳಿಸ್ತಾರೋ ಅವರಿಗೆ ಟಿಕೆಟ್ ನೀಡುತ್ತೇವೆ. ಇದೇ ಕಾರಣಕ್ಕೆ ದೇವೇಗೌಡರು ಪಟ್ಟಿ ಬದಲಾವಣೆ ಬಗ್ಗೆ ಹೇಳಿದ್ದಾರೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ಧಾರೆ.
ಈ ಹಿಂದೆ ಜೆಡಿಎಸ್ ಪಕ್ಷ ಪ್ರಕಟಿಸಲಿರುವ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳು ಖಾಯಂ ಆಗುವುದಿಲ್ಲ, ಬದಲಾವಣೆ, ಸೇರ್ಪಡೆ ಆಗಬಹುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ ದೇವೇಗೌಡರು ಅಭಿಪ್ರಾಯ ಪಟ್ಟಿದ್ದರು.
ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯೇ ಅಂತಿಮ ಎಂದು ಪರಿಗಣಿಸಬಾರದು. ಬದಲಾವಣೆಗಳು ಪ್ರತಿದಿನ ಸಂಭವಿಸುತ್ತವೆ. ಸರ್ವೆಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಈ ಕುರಿತು ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಹಾಸನ ಜಿಲ್ಲೆಯ ಹಾಲಿ ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ತುಮಕೂರು ರಥಯಾತ್ರೆಯಲ್ಲಿ ಮಾತನಾಡಿ ಸಂಭವನೀಯ ಅಭ್ಯರ್ಥಿಗಳು ಜನರ ಬಳಿ ಹೋಗಿ ವಿಶ್ವಾಸ ಗಳಿಸಬೇಕು, ಜನತೆಯ ಅಲೆ ನೋಡಿ ಮೈಮರೆತರೆ ಅಭ್ಯರ್ಥಿ ಬದಲಾಗಬಹುದು. ಕಾರ್ಯಕರ್ತರ ಜತೆ ವಿಶ್ವಾಸ ಕಳೆದುಕೊಂಡರೆ ಅಭ್ಯರ್ಥಿ ಬದಲಾಗ್ತಾರೆ, ಪ್ರತಿ ತಿಂಗಳೂ ಆಯಾ ಕ್ಷೇತ್ರದಿಂದ ರಿಪೋರ್ಟ್ ಪಡೆಯುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
First list of JDS candidates is not final – H D Kumaraswamy…