ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ ಪವರ್ ಸ್ಟಾರ್ ಸಿನಿಮಾದ ಪವರ್ ಫುಲ್ ಫಸ್ಟ್ ಲುಕ್ ರಿಲೀಸ್ ಆಗಿದೆ. ಇಂದು ಬೆಳಿಗ್ಗೆ 11 ಗಂಟೆ 37 ನಿಮಿಷಗಳಿಗೆ ಪವರ್ ಸ್ಟಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡೋದಾಗಿ ಮೊದಲೇ ಹೇಳಿದ್ದ ವರ್ಮಾ, ಸರಿಯಾಗಿ ಹೇಳಿದ ಸಮಯಕ್ಕೆ ಆಟಂ ಬಾಂಬ್ ಹಾಕಿದ್ದಾರೆ. ಈ ಮೂವಿ ಟೈಟಲ್ ನಿಂದಲೇ ಸಂಚಲನವನ್ನ ಸೃಷ್ಠಿಸಿರುವ ಆರ್ ಜಿವಿ ತಾಜಾ ಪೋಸ್ಟರ್ ಮೂಲಕ ಎಲ್ಲರಿಗೂ ಬಿಗ್ ಶಾಕ್ ನೀಡಿದ್ದಾರೆ.
ಪವರ್ ಸ್ಟಾರ್ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ್ದಾಗಿನಿಂದಲೂ ಈ ಮೂವಿ ಪವನ್ ಕಲ್ಯಾಣ್ ಜೀವನ ಕಥೆ ಆಧಾರಿತವಾಗಿತ್ತೆ ಎಂದು ಟಾಕ್ ಕೇಳಿಬಂದಿತ್ತು. ಆದ್ರೆ ತಾನು ಪವನ್ ಕಲ್ಯಾಣ್ ಬಯೋಪಿಕ್ ತೆಗೆಯುತ್ತಿಲ್ಲ ಎಂದ ವರ್ಮಾ, ಪೋಸ್ಟರ್ ಮುಖೇನ ಈ ಚಿತ್ರ ರಾಜಕೀಯ ನೇಪಥ್ಯದಲ್ಲಿ ಇರಲಿದೆ ಎಂದು ಹಿಂಟ್ ನೀಡಿದ್ದಾರೆ.
ಇನ್ನು ತಾಜಾ ಆಗಿ ರಿಲೀಸ್ ಆಗಿರುವ ಪೋಸ್ಟರ್ ಮೇಲೆ “ಎಲೆಕ್ಷನ್ ಫಲಿತಾಂಶ ನಂತರದ ಕಥೆ” ಎಂದು ಬರೆದಿರೋದು ಸಿನಿ, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎಲೆಕ್ಷನ್ ನಲ್ಲಿ ಪವನ್ ಕಲ್ಯಾಣ್ ಸೋತಿದ್ದು, ಆ ನಂತರ ಜರುಗಿದ ಪರಿಣಾಮಗಳ ಮೇಲೆ ವರ್ಮಾ ಕಣ್ಣಿಟ್ಟಿದ್ದಾರೆ ಎಂದು ಸಿನಿಮಾ ಮಂದಿ ಹೇಳಿಕೊಳ್ಳುತ್ತಿದ್ದಾರೆ.








