First Trans Man Pregnancy : ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…
ಭಾರತದಲ್ಲಿ ಮೊದಲ ಬಾರಿಗೆ ತೃತಿಯಲಿಂಗಿ (ಟ್ರಾನ್ಸಜೆಂಡರ್) ದಂಪತಿಗಳು ಪೋಷಕರಾಗಲಿದ್ದಾರೆ. ಮುಂದಿನ ಮಾರ್ಚ್ ತಿಂಗಳಲ್ಲಿ ತೃತೀಯಲಿಂಗಿ ಯುವಕನೊಬ್ಬ ಮಗುವಿಗೆ ಜನ್ಮ ನೀಡಲಿದ್ದಾಳೆ. ಕೇರಳದ ತೃತೀಯಲಿಂಗಿ ದಂಪತಿಗಳಾದ ಜಹಾದ್ ಮತ್ತು ಜಿಯಾ ಪಾವಲ್ ಪೋಷಕರಾಗಲಿದ್ದಾರೆ. ನಮ್ಮ ಕನಸುಗಳು ನನಸಾಗಲಿವೆ ಎಂದು ತಮ್ಮ ಸಂತಸವನ್ನ ದಂಪತಿಗಳು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
23ರ ಹರೆಯದ ಜಿಯಾ ಪೊವೆಲ್, ಹುಡುಗಿಯಾಗಿ ಮಾರ್ಪಟ್ಟಿದ್ದು, ತನ್ನ ತಾಯಿಯಾಗುವ ಕನಸು ಮತ್ತು ತಂದೆಯಾಗುವ ತನ್ನ ಆಸೆ ಶೀಘ್ರದಲ್ಲೇ ನನಸಾಗಲಿದೆ ಎಂದು Instagram ನಲ್ಲಿ ಬಹಿರಂಗಪಡಿಸಿದ್ದಾರೆ. ಈ ಟ್ರಾನ್ಸ್ಜೆಂಡರ್ ದಂಪತಿಗಳು ತಮ್ಮ ಕನಸಿನ ಪ್ರತಿರೂಪವನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ.
ಜಿಯಾ ಪಾವಲ್ ನೃತ್ಯಗಾರ್ತಿ. ಪುರುಷನಾಗಿದ್ದ ಅವರು ಟ್ರಾನ್ಸ್ಜೆಂಡರ್ ಮಹಿಳೆಯಾಗಿದ್ದಾಳೆ. ಜಹಾದ್ ಒಬ್ಬ ಹುಡುಗಿ ಅವರು ಪುರುಷ ಟ್ರಾನ್ಸ್ಜೆಂಡರ್ ಆಗಿ ಬದಲಾಗಿದ್ದಾರೆ. ಗರ್ಭಿಣಿಯಾಗುವ ಕಾರಣಕ್ಕಾಗಿ ಜಹಾದ್ ಹೆಣ್ಣಿನಿಂದ ಗಂಡಾಗಿ ಬದಲಾಗುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರ ತಂಡವು ಗರ್ಭಿಣಿಯಾಗಲು ಯಾವುದೇ ದೈಹಿಕ ಸಮಸ್ಯೆಗಳಿಲ್ಲ ಎಂದು ಬಹಿರಂಗಪಡಿಸಿದ ನಂತರ, ಜಹಾದ್ ಮಗುವಿಗೆ ಜನ್ಮ ನೀಡಲು ಸಿದ್ಧರಾಗಿದ್ದಾರೆ. ಜಹಾದ್ ತನ್ನ ಸ್ತ್ರೀತ್ವವನ್ನು ಉಳಿಸಿಕೊಂಡು ಗರ್ಭಿಣಿಯಾಗಲು ನಿರ್ಧರಿಸಿದ್ದಾರೆ.
First Trans Man Pregnancy: The country’s first transgender youth to give birth to a child…