2ನೇ ಹೆಂಡತಿ ಜೊತೆ ಮೊದಲ ರಾತ್ರಿಗೆ ಸಜ್ಜಾಗಿದ್ದ ಪತಿ : ಮೊದಲ ಪತ್ನಿ ಮಾಡಿದ್ದೇನು ಗೊತ್ತಾ..!
ಬೆಂಗಳೂರು: ಮೊದಲನೇ ಹೆಂಡತಿಯಿದ್ರು ಮತ್ತೊಬ್ಬಳನ್ನ ಮದುವೆಯಾದ. ಮೊದಲನೇ ರಾತ್ರಿ ದಿನವೇ ಜೈಲು ಸೇರಿದ. ದೊಡ್ಡಬಳ್ಳಾಪುರದ ಬೀರಯ್ಯನ ಪಾಳ್ಯದ ನಿವಾಸಿಯಾದ 27 ವರ್ಷದ ಮಧುಸೂದನ್ ಎಂಬಾತ ಈ ಮೊದಲೇ ಮದುವೆಯಾಗಿದ್ರು ಪತ್ನಿಗೆ ಕೈಕೊಟ್ಟು ಮತ್ತೊಬ್ಬಳನ್ನ ಮದುವೆಯಾಗಿ ಫಸ್ಟ್ ಗೆ ರೆಡಿಯಾಗಿದ್ದ. ಅಷ್ಟರಲ್ಲೇ ಆತನ ಮೊದಲ ಪತ್ನಿ ಪುಷ್ಪಲತಾ ಗಂಡನ ವಿರುದ್ಧ ದೂರು ನೀಡಿ ಆತನನ್ನ ಜೈಲಿಗೆ ಕಳುಹಿಸಿದ್ದಾಳೆ.
KGF-2 ಕ್ಲೈಮಾಕ್ಸ್ ಶೂಟಿಂಗ್ ಕಂಪ್ಲೀಟ್ ..! ಕುಂಬಳಕಾಯಿ ಒಡೆದ ಟೀಂ..!
ಇನ್ನೂ ಮಧುಸೂಧನ್ ಈ ಹಿಂದೆ ಪುಷ್ಪಲತಾ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ. ಮನೆಯವರ ವಿರೋಧದ ನಡುವೆಯೇ ಇಬ್ಬರು ಮದುವೆಯಾಗಿ ತೋಟದಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಸಂಬಂಧಿಕರ ಜೊತೆಗೆ ಮಾತನಾಡಲು ಪ್ರಾರಂಭಿಸಿದ್ದ ಮಧುಸೂಧನ್ ತನ್ನ ಮನೆಯರ ಜೊತೆಗೆ ಸೇರಿ ಮತ್ತೊಬ್ಬಳ ಜೊತೆಗೆ ಮದುವೆಯಾಗುವ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಮನೆಯವರ ಪ್ಲಾನ್ ಮೇಲೆ ಫೋನ್ ನಂಬರ್ ಸಹ ಬದಲಾಯಿಸಿದ್ದಾನೆ. ಬಳಿಕ ತಮ್ಮ ಪೋಷಕರೊಂದಿಗೆ ಸೇರಿ ಗೌರಿಬಿದನೂರಿನ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಇತ್ತ ತನ್ನ ಪತಿ ಬೇರೊಬ್ಬಳ ಜೊತೆಗೆ ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆ ಪುಷ್ಪಲತಾ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಆಕೆಯ ದೂರನ್ನ ಆಧರಿಸಿದ ಪೊಲೀಸರು ಮಧುಸೂಧನನ್ನ 2ನೇ ಪತ್ನಿ ಮನೆಯಿಂದ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಇಕ್ಕೇರಿ ನಾಯಕರ ಕೋಟೆ ಕಟ್ಟುವ ಕಲೆಯೇ ಅದ್ಭುತ; ಶಿವಪ್ಪನಾಯಕರ ಬಿದನೂರು ಕೋಟೆ ನಿರ್ಮಾಣದ ದೂರದೃಷ್ಟಿ ಮತ್ತು ಭದ್ರತೆಯ ಸವಿವರ:
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel