ಹೈದರಾಬಾದ್ ನಲ್ಲಿ ಮತ್ಸ್ಯರೂಪದ ಮಗು ಜನನ..!!

1 min read
fish

ಹೈದರಾಬಾದ್ ನಲ್ಲಿ ಮತ್ಸ್ಯ ( fish ) ರೂಪದ ಮಗು ಜನನ..!!

ಹೈದರಾಬಾದ್ : ಭಾಗ್ಯ ನಗರಿ ಹೈದರಾವಾದಿನಲ್ಲಿ ಮತ್ಸ್ಯ ( fish ) ರೂಪದ ಮಗುವೊಂದು ಜನಿಸಿದ್ದು, ಹುಟ್ಟಿದ ಎರಡೇ ಗಂಟೆಗಳಲ್ಲಿ ಮೃತಪಟ್ಟಿದೆ.

ಹೈದರಾಬಾದಿನ ಪೆಟ್ಲಾಬುರ್ಜ್ ನಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ತಹ್ಸೀನ್ ಸುಲ್ತಾನಾ ಮತ್ತು ಮೊಹಮ್ಮದ್ ಆರಿಫ್ ದಂಪತಿಗೆ ಈ ಮಗು ಜನನವಾಗಿತ್ತು.

ಈ ತಿಂಗಳ 5 ರಂದು ತಹಸಿನ್ ಸುಲ್ತಾನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, 10 ರಂದು ಮೀನಿನ ರೂಪದಲ್ಲಿ ಮಗು ಜನಿಸಿದೆ. ಆದರೆ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಎರಡು ತಾಸುಗಳಲ್ಲೇ ಮೃತಪಟ್ಟಿದೆ. ಇನ್ನು ತಾಯಿ ಕ್ಷೇಮವಾಗಿದ್ದಾರೆ.

fish

ಇಂತಹ ಶಿಶು ಜನಿಸುವುದು ಬಹಳ ಅಪರೂಪ ಹಾಗೂ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತವೆ. ಈ ವಿಚಿತ್ರ ಕಾಯಿಲೆಯನ್ನು ‘ಮರ್ಮೇಡ್ ಸಿಂಡ್ರೋಮ್’ ಅಥವಾ ‘ಸೈರೆನೋಮೆಲಿಯಾ’ ಎಂದು ಕರೆಯುತ್ತಾರೆ.

ಈ ಮಕ್ಕಳಲ್ಲಿ ಜಠರ, ಕರುಳು, ಬೆನ್ನುಮೂಳೆ, ಮೂತ್ರಪಿಂಡ ಸೇರಿದಂತೆ ದೇಹದ ಕೆಲ ಅಂಗಾಂಗಗಳು ಒಂದಕ್ಕೊಂದು ಅಂಟಿಕೊಂಡು, ಕಾಲುಗಳು ಕೂಡಿಕೊಂಡಿರುತ್ತವೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd