ಉಡುಪಿ ಜಿಲ್ಲೆಯಲ್ಲಿ ಐದು ದಿನ ಆರೆಂಜ್ ಅಲರ್ಟ್ Udupi
ಉಡುಪಿ : ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಐದು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಐದು ದಿನ ಭಾರೀ ಗಾಳಿ ಮಳೆಯಾಗಲಿದೆ. ಜಿಲ್ಲೆಯ ಜನರು ಮುನ್ನೆಚ್ಚರಿಕೆಯಿಂದಿರಬೇಕು. ಬೀಚ್ ಗೆ ಆಗಮಿಸುವ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕು. ಸಮುದ್ರ ಪ್ರಕ್ಷ್ಯುಬ್ದವಾಗಿರುವುದರಿಂದ ನೀರಿಗಿಳಿಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಮೀನುಗಾರರು ಕೂಡ ಮುನ್ನೆಚ್ಚರಿಕೆವಹಿಸಿ ಎಂದಿರುವ ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಮಟ್ಟದಲ್ಲಿ ಕಂಟ್ರೋಲ್ ರೂಂ ಸಂಪರ್ಕಿಸಿ. ಯಾವುದೇ ಸರ್ಕಾರಿ ಅಧಿಕಾರಿಗಳಿಗೂ ರಜೆ ನೀಡಿಲ್ಲ. ಎಲ್ಲಾ ಅಧಿಕಾರಿಗಳೂ ಕೇಂದ್ರ ಸ್ಥಾನದಲ್ಲಿ ಅಲರ್ಟ್ ಆಗಿರಬೇಕು. ಉಡುಪಿ ಜಿಲ್ಲಾಡಳಿತ ಮಳೆ ಎದುರಿಸಲು ಸರ್ವ ಸನ್ನಧ್ದವಾಗಿದೆ ಎಂದು ತಿಳಿಸಿದ್ದಾರೆ.