ಪುಣೆ – ಅಹ್ಮದ್ ನಗರ ಹೆದ್ದಾರಿಯಲ್ಲಿ ಟ್ರಕ್ ಅಪಘಾತ – 5 ಮಂದಿ ಸಾವು
ಭಾನುವಾರ ರಾತ್ರಿ ಪುಣೆ-ಅಹ್ಮದ್‌ನಗರ ಹೆದ್ದಾರಿಯಲ್ಲಿ ಟ್ರಕ್ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಮುಂಬೈನ ಕಂಡಿವಾಲಿ ನಿವಾಸಿ ಸ್ವಪ್ನಿಲ್ ಪಂಡಿತ್ ಕೆಂದಾಳೆ (24), ಪುಣೆ ನಗರದ ದಾಂಡೇಕರ್ ಸೇತುವೆ ಬಳಿಯ ನಿವಾಸಿಗಳಾದ ಲೀನಾ ರಾಜು ನಿಕಾಸೆ ಮತ್ತು ತೇಜಸ್ ರಾಜು ನಿಕಾಸೆ (24), ವಿಠ್ಠಲ್ ಪೋಪಟ್ ಹಿಂಗಾಡೆ (38), ರೇಷ್ಮಾ ವಿಠ್ಠಲ್ ಹಿಂಗಡೆ (35) ಎಂದು ಗುರುತಿಸಲಾಗಿದೆ. ಇಬ್ಬರೂ ಅಹಮದ್‌ನಗರ ನಿವಾಸಿಗಳಾಗಿದ್ದಾರೆ. Five killed, four injured in accident along Pune-Ahmednagar highway
ಸಂಜೆ 6:15 ರ ಸುಮಾರಿಗೆ ಟ್ರಕ್ ನಿಯಂತ್ರಣ ತಪ್ಪಿ ಡಿವೈಡರ್ ಅನ್ನು ದಾಟಿ ಅಫಾಘಾತ ಸಂಭವಿಸಿದೆ. ಅಪಘಾತದ ನಂತಯರ ಚಾಲಕ ಓಡಿ ಹೋಗಿದ್ದಾನೆ. ಎರ್ಟಿಗಾ ಕಾರಿನಲ್ಲಿದ್ದವರು ಅಹ್ಮದ್‌ನಗರದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಪುಣೆಗೆ ಹಿಂತಿರುಗುತ್ತಿದ್ದರು ಮತ್ತು ದಂಪತಿಗಳು ಬೈಕ್‌ವೊಂದರಲ್ಲಿ ಮುಂಬೈ ಕಡೆಗೆ ಹೋಗುತ್ತಿದ್ದರು. ಇನ್ನೊಂದು ಬೈಕ್‌ನಲ್ಲಿದ್ದ ವ್ಯಕ್ತಿ ಸ್ಥಳೀಯರಾಗಿದ್ದರು’ ಎಂದು ಎಪಿಐ ರಂಜಿತ್ ಪತ್ತಾರೆ ತಿಳಿಸಿದ್ದಾರೆ.
ಗಾಯಗೊಂಡವರನ್ನು ಸಿದ್ಧಾರ್ಥ್ ಸಂಜಯ್ ಕೆಂದಾಳೆ, ಆಶಾ ರಾಜು ನಿಕಾಸೆ, ರಾಜು ಸೀತಾರಾಮ್ ನಿಕಾಸೆ ಮತ್ತು ರೋಹನ್ ಉತ್ತಮ್ ಬಾರ್ವೇಕರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶಿಕ್ರಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.