Virat ಕೊಹ್ಲಿ ಇನ್ನಿಂಗ್ಸ್ ನಿಂದ ನಾವು ಕಲಿಯಬೇಕಾದ ಐದು ಅಂಶಗಳು
ಪಾಕಿಸ್ತಾನ್ ವಿರುದ್ಧದ ಬ್ಲಾಕ್ ಬ್ಲಸ್ಟರ್ ಪಂದ್ಯದಲ್ಲಿ ವಿಶ್ವರೂಪ ಪ್ರದರ್ಶನ ವಿರಾಟ್ ಕೊಹ್ಲಿ ( 53 ಎಸೆತಗಳಲ್ಲಿ 82 ರನ್ ) ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲುವುದರ ಜೊತೆಗೆ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.
ಈ ಗ್ರೇಟ್ ಇನ್ನಿಂಗ್ಸ್ ನಿಂದ ನಾವೆಲ್ಲಾ ಐದು ವಿಷಯಗಳನ್ನು ಕಲಿತುಕೊಳ್ಳಬೇಕು ಎಂದು ಐಎಎಸ್ ಅಧಿಕಾರಿ ಅವನಿಶ್ ಶರಣ್ ಹೇಳಿದ್ದಾರೆ.
ಸದ್ಯ ಅವರು ಮಾಡಿದ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೊಹ್ಲಿಯಿಂದ ನಾವು ಕಲಿತುಕೊಳ್ಳಬೇಕಾದ ಐದು ಅಂಶಗಳು
- ಬ್ಯಾಡ್ ಟೈಂ ತಾತ್ಕಾಲಿಕ.. ಶಾಶ್ವತವಲ್ಲ
- ಕೆಲಸದ ಮೂಲಕ ಉತ್ತರಿಸಬೇಕು
- ಕೊನೆಯವರೆಗೂ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು
- ಜನರು ಯಾವುದೇ ವಿಷಯವನ್ನು ಬೇಗ ಮರೆಯುತ್ತಾರೆ ಎಂಬೋದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು
ನಿಮ್ಮ ಆತ್ಮವಿಶ್ವಾಸ ಹೆಚ್ಚಿದ್ದರೆ ಎಂತಹ ದೊಡ್ಡ ಸಮಸ್ಯೆಯನ್ನಾದರೂ ಸುಲಭವಾಗಿ ದಾಟಬಹುದು.