ಪಂಚ ರಾಜ್ಯ ಚುನಾವಣೆ : ಮೋದಿ ಪ್ರಚಾರಕ್ಕೆ ಬ್ಲೂಪ್ರಿಂಟ್ ರೆಡಿ..!
ನವದೆಹಲಿ : ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆ ಮಾಡಿದೆ. ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರದ ಅಖಾಡಕ್ಕೆ ಧುಮುಕಿ, ಮತಬೇಟೆ ಆರಂಭಿಸಿವೆ.
ಅದರಲ್ಲೂ ದೀದಿ ನಾಡು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಕೇಸರಿ ಪತಾಕೆಯನ್ನ ಹಾರಿಸಲೇಬೇಕೆಂದು ಬಿಜೆಪಿ ಪಣತೊಟ್ಟಿದ್ದು, ರಣತಂತ್ರಗಳನ್ನ ರೂಪಿಸುತ್ತಿದ್ದಾರೆ. ಚುನಾವಣೆ ಬಿಜೆಪಿ ರಣೋತ್ಸಾಹದಿಂದ ಮುನ್ನುಗ್ಗುತ್ತೆ. ಅದರಂತೆ ಬಿಜೆಪಿ ತನ್ನ ಬ್ರಹ್ಮಾಸ್ತ್ರ ನರೇಂದ್ರ ಮೋದಿ ಪ್ರಚಾರಕ್ಕೆ ದಿನಾಂಕ ಫಿಕ್ಸ್ ಮಾಡಿ ಬ್ಲೂಪ್ರಿಂಟ್ ರೆಡಿ ಮಾಡಿದೆ.
ಪಶ್ಚಿಮ ಬಂಗಾಳದತ್ತ ಹೆಚ್ಚು ಗಮನ ಹರಿಸಿರುವ ಬಿಜೆಪಿ, ಅಲ್ಲಿ ಹೆಚ್ಚು ಪ್ರಚಾರಗಳನ್ನ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಒಟ್ಟು 20 ರ್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಜತೆಗೆ ಅಸ್ಸೋಂನಲ್ಲಿ 6 ಸಭೆಗಳಲ್ಲಿ ಚುನಾವಣಾ ಭಾಷಣ ಮಾಡಲಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಅಸ್ಸೋಂ ಎರಡು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, 56 ಜಿಲ್ಲೆಗಳಲ್ಲಿ ಮತಬೇಟೆ ನಡೆಸಲಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ತನ್ನ ಆಟ ಶುರು ಮಾಡಿರುವ ಬಿಜೆಪಿ ಕೆಲವು ಟಿಎಂಸಿ ಶಾಸಕರನ್ನ ಪಕ್ಷಕ್ಕೆ ಸೆಳೆದುಕೊಂಡಿದೆ.