ಐದು ರಾಜ್ಯಗಳಲ್ಲಿ ಕೋವಿಡ್ -19 ದೈನಂದಿನ ಪ್ರಕರಣಗಳು ಏರಿಕೆ
ಹೊಸದಿಲ್ಲಿ, ಫೆಬ್ರವರಿ21: ಐದು ರಾಜ್ಯಗಳು ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ದಾಖಲಿಸಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ ಘಡ್ ಮತ್ತು ಮಧ್ಯಪ್ರದೇಶಗಳಲ್ಲಿ ದೈನಂದಿನ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ ಎಂದು ಕೇಂದ್ರವು ಶನಿವಾರ (ಫೆಬ್ರವರಿ 20) ತಿಳಿಸಿದೆ.
ಕೋವಿಡ್ -19 ಸೋಂಕಿನ ವಿರುದ್ಧ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಿಗೆ ಇದುವರೆಗೆ 1.07 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಮಹಾರಾಷ್ಟ್ರ
ಶನಿವಾರ ದೇಶದಲ್ಲಿ ಅತಿ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ.
ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಕೊವಿಡ್ -19 ಪ್ರಕರಣಗಳು ಮುಂಬಯಿಯಲ್ಲಿ 37 ಪ್ರತಿಶತದಷ್ಟು ಹೆಚ್ಚಾಗಿದ್ದು, ಮುಂಬಯಿ ಶುಕ್ರವಾರ 823 ಪ್ರಕರಣಗಳನ್ನು ದಾಖಲಿಸಿದೆ.
ಇದು ಡಿಸೆಂಬರ್ ನಂತರ ಸೋಂಕುಗಳ ಏಕೈಕ ದಿನದ ಹೆಚ್ಚಳವಾಗಿದೆ.
ಕೇರಳ
ಕೇರಳವು ಹೆಚ್ಚಿನ ಸಂಖ್ಯೆಯ ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಶನಿವಾರ 24 ಗಂಟೆಗಳಲ್ಲಿ 4505 ಪ್ರಕರಣಗಳು ದಾಖಲಾಗಿದೆ. ಒಟ್ಟು ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ ಶೇಕಡಾ 75.87 ರಷ್ಟು ಮಹಾರಾಷ್ಟ್ರ ಮತ್ತು ಕೇರಳದಲ್ಲಿದ್ದರೆ, ಹೊಸ ಸಾವುಗಳಲ್ಲಿ 78 ಪ್ರತಿಶತ 5 ರಾಜ್ಯಗಳಲ್ಲಿ ಮಾತ್ರ ವರದಿಯಾಗಿದೆ.
ಛತ್ತೀಸ್‌ಗಢ್
ಕಳೆದ 7 ದಿನಗಳಲ್ಲಿ, ಛತ್ತೀಸ್‌ಗಢ್ ನಲ್ಲಿ ದೈನಂದಿನ ಸಕ್ರಿಯ ಹೊಸ ಪ್ರಕರಣಗಳ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ, ಪ್ರತಿದಿನ 259 ಹೊಸ ಪ್ರಕರಣಗಳು ವರದಿಯಾಗಿವೆ.
ಪಂಜಾಬ್
ಮಹಾರಾಷ್ಟ್ರದಂತೆಯೇ, ಪಂಜಾಬ್ ಕಳೆದ 7 ದಿನಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 383 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ.
ಮಧ್ಯಪ್ರದೇಶ
13 ಫೆಬ್ರವರಿ 2021 ರಿಂದ ಮಧ್ಯಪ್ರದೇಶದಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಪ್ರತಿದಿನ 297 ಹೊಸ ಪ್ರಕರಣಗಳು ದಾಖಲಾಗಿವೆ.
ಕಳೆದ ಏಳು ದಿನಗಳಲ್ಲಿ ಛತ್ತೀಸ್‌ಗಡ ದಲ್ಲಿ ದೈನಂದಿನ ಸಕ್ರಿಯ ಹೊಸ ಪ್ರಕರಣಗಳ ಏರಿಕೆ ಕಂಡುಬಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 259 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಅದು ಹೇಳಿದೆ.