ಫೈಝರ್ ಲಸಿಕೆ ಅಡ್ಡಪರಿಣಾಮ : ನಾರ್ವೆಯಲ್ಲಿ ‘ಫೈಝರ್ ಲಸಿಕೆ’ಗೆ 23 ಹಿರಿಯ ನಾಗರೀಕರು ಬಲಿ
ನಾರ್ವೆ : ನಾರ್ವೆಯಲ್ಲಿ ಡಿಸೆಂಬರ್ 2019ರ ಅಂತ್ಯದಲ್ಲಿ ಕೊರೋನಾ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಫೈಝರ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಫೈಜರ್ ಲಸಿಕೆ ನೀಡಲಾಗಿತ್ತು. ಲಸಿಕೆ ಪಡೆದವರಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟವರೂ ಸೇರಿದ್ದರು. ಇದೀಗ ಆಘಾತಕಾರಿ ವಿಚಾರವೊಂದು ಬಹಿರಂಗವಾಗಿದೆ. ಹೀಗೆ ಲಸಿಕೆ ಪಡೆದ 23 ಹಿರಿಯ ನಾಗರೀಕರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಮದ್ಯ ಪ್ರಿಯರಿಗೆ ಸ್ಯಾಡ್ ನ್ಯೂಸ್… ಲಸಿಕೆ ಹಾಕಿಸಿಕೊಂಡಮೇಲೆ 45 ದಿನಗಳವರೆಗೆ ಎಣ್ಣೆ ಮುಟ್ಟಂಗಿಲ್ಲ..!
ಈ ಕುರಿತಂತೆ ನಾರ್ವೇಜಿನ್ ಮೆಡಿಸಿನ್ ಏಜೆನ್ಸಿ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಿದ್ದು, ಮೃತಪಟ್ಟ 23 ಹಿರಿಯ ನಾಗರೀಕರಲ್ಲಿ 13 ಮಂದಿ ಫೈಝರ್ ಎಂ.ಆರ್.ಎನ್ ಸಿ ಲಸಿಕೆ ಪಡೆದಿದ್ದರು. ಹೀಗೆ ಲಸಿಕೆ ಪಡೆದ ನಂತ್ರ ಅತಿಸಾರ, ವಾಂತಿ ಹಾಗೂ ಜ್ವರದಂತ ಅಡ್ಡ ಪರಿಣಾಮದಿಂದಾಗಿ ಮೃತಪಟ್ಟಿರುವುದಾಗಿ ಬಹಿರಂಗ ಪಡಿಸಿದೆ. ಇದು ಕೊರೊನಾ ಫೈಜರ್ ಲಸಿಕೆ ಅಷ್ಟೇ ಅಲ್ಲದೇ ಇತರೇ ಲಸಿಕೆ ಬಗ್ಗೆ ಜನರಲ್ಲಿ ಆತಂಕ ಹುಟ್ಟುಹಾಕಲು ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel