ಕೇಂದ್ರ ಸರ್ಕಾರದ ಟೆಲಿಮೆಡಿಸಿನ್ ಯೋಜನೆ ಇಸಂಜೀವಿನಿಗೆ ಒಂದೇ ದಿನ 3.5 ಲಕ್ಷ ಕರೆ ಸಮಾಲೋಚನೆ..
ಕೇಂದ್ರ ಸರ್ಕಾರದ ಪ್ರಮುಖ ಟೆಲಿಮೆಡಿಸಿನ್ ಯೋಜನೆಯಾದ ಇಸಂಜೀವಿನಿ ಮೂಲಕ ಈ ತಿಂಗಳ 26 ಮತ್ತು 27 ರಂದು ದಾಖಲೆಯ 3.5 ಲಕ್ಷ ಟೆಲಿ ಕಾಲ್ ಸಮಾಲೋಚನೆಗಳನ್ನು ಸ್ವೀಕರಿಸಲಾಗಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು (AB-HWC) ನಾಗರೀಕರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ತಮ್ಮ ಧ್ಯೇಯದಲ್ಲಿ ಮೈಲಿಗಲ್ಲನ್ನ ಮುಟ್ಟಿವೆ.
ಕೇಂದ್ರ ಆರೋಗ್ಯ ಸಚಿವಾಲಯವು ಈ ಕ್ಷೇಮ ಕೇಂದ್ರಗಳಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚ ಕರೆಗಳನ್ನ ಸ್ವೀಕರಿಸಿದ್ದೇವೆ ಎಂದು ಹೇಳಿದೆ. ಇದಲ್ಲದೇ ಈ ತಿಂಗಳ 26 ಮತ್ತು 27ರಂದು ಇಸಂಜೀವನಿ ಒಪಿಡಿ ಟೆಲಿಮೆಡಿಸಿನ್ ಸೇವೆಯನ್ನು 76 ಲಕ್ಷಕ್ಕೂ ಹೆಚ್ಚು ರೋಗಿಗಳು ಪಡೆದುಕೊಂಡಿದ್ದಾರೆ.
ಇಸಂಜೀವನಿ AB-HWC ಗ್ರಾಮೀಣ ಪ್ರದೇಶದ ಜನರಿಗೆ, ವೈದ್ಯರಿಂದ ಸಾಮಾನ್ಯ ಮತ್ತು ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲು ಟೆಲಿಮೆಡಿಸಿನ್ ಸೇವೆಯಾಗಿದೆ.
ಈ ಸಂಜೀವಿನಿಗೆ ಕರೆ ಮಾಡಿದರೆ ಕ್ಷೇಮ ಕೇಂದ್ರಗಳಲ್ಲಿರುವವರು ವೈದ್ಯರು ಮತ್ತು ತಜ್ಞರ ನಡುವೆ ವರ್ಚುವಲ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಹಬ್‌ನಲ್ಲಿರುವ ವೈದ್ಯರು ಮತ್ತು ತಜ್ಞರಿಂದ ನೈಜ-ಸಮಯದ ವರ್ಚುವಲ್ ಸಮಾಲೋಚನೆಯನ್ನು ಇದು ಸುಗಮಗೊಳಿಸುತ್ತದೆ. ಪ್ರಸ್ತುತ, ಇಸಂಜೀವನಿ 80 ಸಾವಿರಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇಸಂಜೀವನಿ OPD ಎನ್ನುವುದು ರೋಗಿಗಳಿಂದ ವೈದ್ಯರಿಗೆ ಟೆಲಿಮೆಡಿಸಿನ್ ಸೇವೆಯಾಗಿದ್ದು, ಜನರು ತಮ್ಮ ಮನೆಗಳ ಮಿತಿಯಲ್ಲಿ ಹೊರರೋಗಿ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.








