ವಿಮಾನದ ಊಟದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆ… ವಿಡಿಯೋ ವೈರಲ್
ಟರ್ಕಿ ಮೂಲದ ವಿಮಾನಯಾನ ಕಂಪನಿಗೆ ಸೇರಿದ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆಯಾಗಿದೆ. ಜುಲೈ 21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್‌ಗೆ ಹೋಗುತ್ತಿದ್ದ ಸನ್‌ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.
ಒಂದು ಸಣ್ಣ ಹಾವಿನ ತಲೆ ಆಲೂಗಡ್ಡೆ ಮತ್ತು ತರಕಾರಿಗಳ ನಡುವೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಮಾನಯಾನ ಕಂಪನಿ ಹೇಳಿಕೆ ನೀಡಿದ್ದು, ಈ ಘಟನೆ ಸ್ವೀಕಾರರ್ಹವಲ್ಲ. ಆಹಾರ ಪೂರೈಕೆದಾರರೊಂದಿಗಿನ ಒಪ್ಪಂದವನ್ನ ನಾವು ರದ್ದು ಮಾಡಿಕೊಂಡಿದ್ದೇವೆ. ತನಿಖೆಯನ್ನ ಸಹ ಪ್ರಾರಂಭಿಸಿದ್ದೇವೆ ಎಂದು ಕಂಪನಿ ಹೇಳಿದೆ.
https://twitter.com/i/status/1551743925047754752
“ವಿಮಾನಯಾನ ಉದ್ಯಮದಲ್ಲಿ 30 ವರ್ಷಗಳ ಅನುಭವದೊಂದಿಗೆ, ವಿಮಾನದಲ್ಲಿ ಅತಿಥಿಗಳಿಗೆ ನಾವು ಒದಗಿಸುವ ಸೇವೆಗಳು ಉತ್ತಮ ಗುಣಮಟ್ಟದೊಂದಿಗೆ ಅತಿಥಿಗಳು ಮತ್ತು ಉದ್ಯೋಗಿಗಳು ಆರಾಮದಾಯಕ, ಸುರಕ್ಷಿತ ಹಾರಾಟದ ಅನುಭವ ಹೊಂದಿರುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ಏರ್ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ರೀತಿಯ ಘಟನೆ ದೆಹಲಿಯಲ್ಲೂ ನಡೆದಿತ್ತು ಚಿಕನ್ ಸಲಾಡ್ ಕೇಳಿದ್ದ ವ್ಯಕ್ತಿಯ ಊಟದಲ್ಲಿ ಸತ್ತ ಹಲ್ಲಿ ಕಂಡುಬಂದಿತ್ತು..








