Flight Highjack : ವಿಮಾನ ಹೈಜಾಕ್ – ಸುಳ್ಳು ಟ್ವೀಟ್ , ಕಾರಣ ವಿಚಿತ್ರ…!!!
ಪ್ರಯಾಣಿಕನ ಬಂಧಿಸಿದ ಪೊಲೀಸರು
ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನ
ವಿಮಾನ ತಡವಾಗಿದ್ದಕ್ಕೆ ಬೇಸರಗೊಂಡಿದ್ದ ಪ್ರಯಾಣಿಕ
ಸುಳ್ಳು ಟ್ವೀಟ್ ಮಾಡಿ ಆತಂಕ ಸೃಷ್ಟಿ
ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಬಂಧನ
ವ್ಯಕ್ತಿಯೋರ್ವ ವಿಮಾನ ಹೈಜಾಕ್ ಆಗಿರೋದಾಗಿ ಸುಳ್ಳು ಟ್ವೀಟ್ ಮಾಡಿ ಹುಚ್ಚಾಟ ಮೆರೆದಿದ್ದಾನೆ.. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ.. ಆದ್ರೆ ಈತ ಹೀಗೆ ಮಾಡಿರೋದಕ್ಕೆ ನೀಡಿರುವ ಕಾರಣ ವಿಚಿತ್ರವಾಗಿದೆ..
ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ವಿಮಾನ ಅಪಹರಣವಾಗಿದೆ ಎಂದು ಸುಳ್ಳು ಟ್ವೀಟ್ ಮಾಡಿದ್ದ..
ಈ ಸುದ್ದಿ ತಿಳಿದ ತಕ್ಷಣವೇ ಅಧಿಕಾರಿಗಳು , ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಂತಹ ಸಂದರ್ಭದಲ್ಲಿ ಐಜಾಕ್ ಸುದ್ದಿ ಸುಳ್ಳೆಂಬುದು ಗೊತ್ತಾಗಿದೆ…
ಬಳಿಕ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಪ್ರಯಾಣಿಕನನ್ನು ಬಂಧಿಸಿದ್ದಾರೆ.
ಪೊಲೀಸ್ ಉಪ ಕಮಿಷನರ್ ರವಿಕುಮಾರ್ ಸಿಂಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ..
ರಾಜಸ್ಥಾನದ ನಾಗೌರ್ ನಿವಾಸಿಯಾಗಿರುವ ಮೋತಿ ಸಿಂಗ್ ರಾಥೋಡ್ ಎಂಬಾತ ಈ ರೀತಿ ಮಾಡಿದ್ದು , ಈತ ದುಬೈ -+ ಜೈಪುರಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು..
ಹವಾಮಾನ ವೈಪರೀತ್ಯದಿಂದ ವಿಮಾನವು ಇಂದಿರಾಗಾಂಧಿ ಏರ್ ಪೋರ್ಟ್ ತಲುಪಿತ್ತು.. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು 9.45 ಕ್ಕೆ ಇಳಿದು ಮಧ್ಯಾಹ್ನ 1.40 ಕ್ಕೆ ಮತ್ತೆ ಟೇಕ್ ಆಫ್ ಮಾಡಲು ಅನುಮತಿ ನೀಡಲಾಗಿತ್ತು..
ವಿಮಾನ ವಿಳಂಬಗೊಂಡಿದ್ದರಿಂದ ಬೇಸರಗೊಂಡು ಈ ರೀತಿ ಮಾಡಿರೋದಾಗಿ ಆರೋಪಿ ಹೇಳಿರೋದಾಗಿ ಪೊಲೀಸರು ತಿಳಿಸಿದ್ದಾರೆ..