Flipkart Big Billion Days | ಅಮೆಜಾನ್ – ಫ್ಲಿಪ್ ಕಾರ್ಟ್ ಬಿಗ್ ಸೇಲ್ ಆಫರ್…
ವಾರ್ಷಿಕ ವಿಶೇಷ ಮಾರಾಟ ದಿನಾಂಕ ಪ್ರಕಟ
ಸೆ.23 ರಿಂದ ಸೆ.30ರವರೆಗೆ ಬಿಗ್ ಬಿಲಿಯನ್ ಡೇ
ಅಮೆಜಾನ್ ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್
ಅಮೆಜಾನ್ ನಲ್ಲಿ ಬರೋಬ್ಬರಿ 70% ಆಫರ್
ಇ ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್ ಕಾರ್ಟ್ ಮತ್ತು ಅಮೆಜಾgನ್ ಸಂಸ್ಥೆಗಳು ದೇಶದಲ್ಲಿ ವಾರ್ಷಿಕ ವಿಶೇಷ ಮಾರಾಟ ದಿನಾಂಕವನ್ನು ಪ್ರಕಟ ಮಾಡಿವೆ.
ಸೆಪ್ಟಂಬರ್ 23 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭವಾಗಿದೆ. ಇದು ಸೆಪ್ಟೆಂಬರ್ 30 ರವರೆಗೂ ನಡೆಯಲಿದೆ. ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಿಗೆ ಸೇಲ್ ಒಂದು ದಿನ ಮುಂಚಿತವಾಗಿ ಆರಂಭವಾಗಲಿದೆ.
ಇತ್ತ ಹಬ್ಬದ ಪ್ರಯುಕ್ತವಾಗಿ ಅಮೆಜಾನ್ ಭಾರತದಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯಲಿದೆ. ಸೆಪ್ಟೆಂಬರ್ 23 ರಿಂದ ವಿಶೇಷ ಕೊಡುಗೆ ಸೇಲ್ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.
ಗ್ರಾಹಕರು ಎಸ್ ಬಿಐ ಡೆಬಿಟ್ ಕಾರ್ಡ್ ಮತ್ತು ಕ್ರಿಡಿಟ್ ಕಾರ್ಡ್ ಬಳಸಿ ಖರೀದಿಸಿದರೆ, ಅವರಿಗೆ ಶೇಕಡಾ 10 ರಷ್ಟು ರಿಯಾಯಿತಿ ಸಿಗಲಿದೆ. ಮೊದಲ ಖರೀದಿಗೆ ಕ್ಯಾಷ್ ಬ್ಯಾಕ್, ಎಕ್ಸ್ ಚೇಂಜ್ ಆಫರ್ ಇರಲಿದೆ.