ಹಬ್ಬದ ಸೀಸನ್‍ನಲ್ಲಿ ಜವಾಬ್ದಾರಿಯುತ ಬಳಕೆಯನ್ನು ಹೆಚ್ಚಿಸಲು ಸುಸ್ಥಿರ ಮೌಲ್ಯ ಜಾಲಕ್ಕೆ ಫ್ಲಿಪ್‍ಕಾರ್ಟ್ ಉತ್ತೇಜನ

1 min read
Flipkart saaksha tv

ಹಬ್ಬದ ಸೀಸನ್‍ನಲ್ಲಿ ಜವಾಬ್ದಾರಿಯುತ ಬಳಕೆಯನ್ನು ಹೆಚ್ಚಿಸಲು ಸುಸ್ಥಿರ ಮೌಲ್ಯ ಜಾಲಕ್ಕೆ ಫ್ಲಿಪ್‍ಕಾರ್ಟ್ ಉತ್ತೇಜನ

ಬೆಂಗಳೂರು : ದೇಶೀಯ ಇ-ಕಾಮರ್ಸ್ ಕಂಪನಿ ಫ್ಲಿಪ್‍ಕಾರ್ಟ್ ವಿತರಣಾ ಜಾಲಕ್ಕೆ ಸೇರ್ಪಡೆಯಾಗುತ್ತಿರುವ ಮಾರಾಟಗಾರರು, ರೀಟೇಲರ್‍ಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕಂಪನಿಯ ತಂಡಗಳ ಅವಿರತ ಶ್ರಮದಿಂದಾಗಿ ಪ್ಲಾಸ್ಟಿಕ್ ಹೊರತಾದ ಪ್ಯಾಕೇಜಿಂಗ್‍ಗಳಿಗೆ ಪರ್ಯಾಯ ಸುಸ್ಥಿರವಾದ ಪ್ಯಾಕೇಜಿಂಗ್ ವ್ಯವಸ್ಥೆಯ ಅಳವಡಿಕೆಯ ಪ್ರಮಾಣವೂ ಹೆಚ್ಚಾಗತೊಡಗಿದೆ. ಸುಸ್ಥಿರವಾದ ಪ್ಯಾಕೇಜಿಂಗ್ ಪರ್ಯಾಯಗಳನ್ನು ಮಾರಾಟಗಾರ ಪಾಲುದಾರರೊಂದಿಗೆ ಬಾಳಿಕೆ, ಗಾತ್ರ ಮತ್ತು ವೆಚ್ಚದ ದಕ್ಷತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗುತ್ತಿದೆ.

ವೇಳೆ ಬರುವ ಆರ್ಡರ್‍ಗಳನ್ನು ಕ್ಷಿಪ್ರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಫ್ಲಿಪ್‍ಕಾರ್ಟ್ ದೇಶದ 90 ನಗರಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದೆ. 2030 ರ ವೇಳೆಗೆ ಕಂಪನಿಯು ತನ್ನ ವಿತರಣಾ ಜಾಲದಲ್ಲಿ 25,000 ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ಮೂಲಕ ಸಂಪೂರ್ಣವಾಗಿ ಅಂದರೆ ಶೇ.100 ರಷ್ಟು ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ತನ್ನ ಬದ್ಧತೆಯನ್ನು ಪೂರೈಸುವತ್ತ ಹೆಜ್ಜೆ ಇಟ್ಟಿದೆ. ಇದು ಹವಾಮಾನ ಸಮೂಹದ ಇವಿ100 ಅಭಿಯಾನದ ಭಾಗವಾಗಿದ್ದು, ಅದರಂತೆ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಸಾಗಿದೆ.

Flipkart saaksha tv

ಈ ಬಗ್ಗೆ ಮಾತನಾಡಿದ ಸಂಸ್ಥೆಯ ಸುಸ್ಥಿರತೆ ಮತ್ತು ಸಾಮಾಜಿಕ ಹೊಣೆಗಾರಿಕೆ ವಿಭಾಗದ ಮುಖ್ಯಸ್ಥ ಮಹೇಶ್ ಪ್ರತಾಪ್ ಸಿಂಗ್ ಅವರು, “ಹಬ್ಬದ ಸೀಸನ್ ಎನ್ನುವುದು ನಮ್ಮ ಎಲ್ಲಾ ಪಾಲುದಾರರಿಗೆ ಪ್ರಗತಿಪರವಾದ ಮೌಲ್ಯವನ್ನು ಸೃಷ್ಟಿಸುವಂತಹದ್ದು. ಅಲ್ಲದೇ, ನಮ್ಮ ಪ್ರತಿ ಗ್ರಾಹಕರಿಗೆ ಪ್ರತಿ ಆರ್ಡರ್‍ನೊಂದಿಗೆ ಸಮರ್ಥನೀಯವಾದ ಹಬ್ಬದ ಸೀಸನ್ ಅನ್ನು ತರುವ ಭರವಸೆಯನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತದೆ. ಈ ಹಬ್ಬದ ಸೀಸನ್‍ನಲ್ಲಿ ನಮ್ಮ ಸಾವಿರಾರು ವಿತರಣಾ ಪ್ರತಿನಿಧಿಗಳು 90 ನಗರಗಳ ಪಿನ್‍ಕೋಡ್‍ಗಳಲ್ಲಿ 2000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮೂಲಕ ಸಾವಿರಾರು ಉತ್ಪನ್ನಗಳನ್ನು ವಿತರಣೆ ಮಾಡಲಿದ್ದಾರೆ. ಇದು ನಮ್ಮ ಕಟ್ಟಕಡೆಯ ಗ್ರಾಹಕರಿಗೂ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ಶೇ.100 ಕ್ಕೆ ನೂರರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ನಮ್ಮ ಗುರಿಯತ್ತ ಹೆಜ್ಜೆ ಇಟ್ಟಿರುವುದಾಗಿದ್ದು, ನಮಗೆ ಸಂತಸ ತಂದಿದೆ. ಬೆಂಗಳೂರು, ದೆಹಲಿ/ಎನ್‍ಸಿಆರ್, ಮುಂಬೈ, ಚೆನ್ನೈ, ವೈಧಾನ್, ಹೈದ್ರಾಬಾದ್, ವಿಡಿಶಾ, ಶಾಜಾಪುರ, ಝಬುಆ, ಪುಣೆ, ಸೊನಾಯ್, ಮೈಸೂರು, ರಾಂಪುರ, ಥಾಣೆ ಮತ್ತು ಫರಿದಾಬಾದ್ ಸೇರಿದಂತೆ ಇನ್ನಿತರೆ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದ್ದೇವೆ. ಇದಲ್ಲದೇ, ಹಬ್ಬದ ಸಂದರ್ಭದಲ್ಲಿ ವಿತರಣಾ ಜಾಲದಲ್ಲಿ ಒಂದು ಬಾರಿ ಬಳಕೆ ಮಾಡುವಂತಹ ಪ್ಲಾಸ್ಟಿಕ್ ಅನ್ನು ಮುಕ್ತಗೊಳಿಸಲಿದ್ದೇವೆ’’ ಎಂದು ತಿಳಿಸಿದರು.

ಫೋಟೋ ಶೀರ್ಷಿಕೆ: ದೇಶೀಯ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್‍ಕಾರ್ಟ್ ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಸ್ ವೇಳೆಗೆ ಗ್ರಾಹಕರಿಗೆ ಉತ್ಪನ್ನಗಳನ್ನು ಪ್ಲಾಸ್ಟಿಕ್ ಮುಕ್ತ ಪ್ಯಾಕೇಜ್‍ಗಳಲ್ಲಿ ವಿತರಣೆ ಮಾಡಲಿದ್ದು, ಈ ವಿತರಣೆ ಪ್ರಕ್ರಿಯೆಗೆ ದೇಶಾದ್ಯಂತ 2000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜನೆ ಮಾಡುತ್ತಿದೆ. ಈ ವರ್ಷದ ಜುಲೈ ತಿಂಗಳಲ್ಲಿ ತನ್ನದೇ ಆದ ಸಪ್ಲೈ ಚೇನ್‍ನಲ್ಲಿ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಸಂಕಲ್ಪ ಮಾಡಿದ್ದ ಕಂಪನಿಯು, ಇದರನ್ವಯ ಕಂಪನಿಯ ಮಾರಾಟಗಾರರು ಶೇ.75 ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಪ್ಯಾಕೇಜ್‍ಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿದ್ದು, ಇದಕ್ಕಾಗಿ ಸುಸ್ಥಿರವಾದ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಮಾಡುತ್ತಿವೆ. ದೇಶಾದ್ಯಂತ 70 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜುಲೈ 2020 ರಿಂದ ಈ ಸುಸ್ಥಿರ ಪ್ಯಾಕೇಜಿಂಗ್ ಪ್ರಮಾಣ 20 ಪಟ್ಟಿಗೂ ಅಧಿಕ ಹೆಚ್ಚಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd