ಸುಗಂಧಕ್ಕೆ ಜಗತ್ ಪ್ರಸಿದ್ಧಿ ಪಡೆದಿರುವ ಸುಗಂಧರಾಜದ – ಆರೋಗ್ಯ ಪ್ರಯೋಜನಗಳು..!
ಸುಗಂಧರಾಜ…. ಪರಿಮಳಯುಕ್ತ ಸುಗಂಧರಾಜ ಹೂವು ಅದರ ಸುಗಂಧಕ್ಕೆ ಜಗತ್ ಪ್ರಸಿದ್ಧಿ ಪಡೆದಿರುವ ಹೂವು. ಇದು ಕತ್ತಾಳೆಗೆ ಸಂಬಂಧಿಸಿದ ಒಂದು ಬಹುವಾರ್ಷಿಕ ಸಸ್ಯ. ಸುಗಂಧರಾಜ ಮೆಕ್ಸಿಕೋಗೆ ಸ್ಥಳೀಯವಾದ, ಪಾಲಿಯಾಂಥೀಸ್ ನ ಇತರ ಪರಿಚಿತವಾದ ಪ್ರಜಾತಿಗಳಂತೆ ರಾತ್ರಿಯಲ್ಲಿ ಅರಳುವ ಸಸ್ಯವಾಗಿದೆ.
ಈ ಹೂವು ಬಿಳಿ ಬಣ್ಣದಲ್ಲಿ ನೋಡಲು ಅತ್ಯಂತ ಆಕರ್ಷಣೀಯವಾಗಿದ್ದು, ಗೊಂಚಲಲು ಗೊಂಚಲಾಗಿ ಬೆಳೆಯುತ್ತದೆ. ಈ ಹೂವುಗಳು ಕೆಳಗಿನಿಂದ ಕದಿರಿನ ಮೇಲಕ್ಕೆ ಅರಳುತ್ತವೆ. ಈ ಹೂವನ್ನು ದೇವಿಗೆ ಇಡಲು, ಕೆಲವರು ಮುಡಿಯಲು ಬಳಸುತ್ತಾರೆ. ಆದ್ರೆ ಇದನ್ನ ಹೆಚ್ಚಾಗಿ ಸುಗಂಧ ದ್ರವ್ಯ ತಯಾರಿಸಲು ಬಳಸಲಾಗುತ್ತೆ.
ಕನ್ನಡದಲ್ಲಿ ಸಸುಗಂಧರಾಜ, ಇಂಗ್ಲಿಷ್ ನಲ್ಲಿ TUBE ROSE, ವೈಜ್ಞಾನಿಕ ಹೆಸರು ಪಾಲಿಯಾಂಥಸ್ ಟ್ಯೂಬ್ ರೋಸಾ, ಸ್ಪ್ಯಾನಿಷ್ ನಲ್ಲಿ ಅಗೇವ್ ಅಮಿಕಾ ಅಂತ ಕಕರೆಯುತ್ತಾರೆ.
ಆರೋಗ್ಯ ಪ್ರಯೋಜನಗಳು
ಅನಿಮಿಯಾ ನಿವಾರಣೆಗೆ ಸಹಾಯಕಾರಿ: ಸುಗಂಧ ರಾಜ ಅನಿಮೀಯ ಕಾಯಿಲೆಯನ್ನ ಗುಣಪಡಿಸಲು ಸಹಾಯ ಮಾಡುತ್ತೆ. ರಕ್ತವನ್ನ ಹೆಚ್ಚಿಸುವ ಜೊತೆಗೆ ದೇಹಹದ ಫಿಟ್ ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ.
ದೃಷ್ಠಿ ದೋಷ ನಿವಾರಣೆಗೆ: ದೃಷ್ಠಿ ದೋಷ ನಿವಾರಣೆ ಮಾಡುವ ಶಕ್ತಿ ಸುಗಗಂಧ ರಾಜ ಹೂವಿಗಿದೆ. ಕಣ್ಣಿನ ಪೊರೆ ಅಥವ ಮಂಜುಮಂಜಾಗಿ ಕಾಣಿಸುತ್ತಿದ್ದರೆ ಅಂತಹ ದೋಷಗಳ ಪರಿಹಾರಕ್ಕೆ ಸುಗಂಧರಾಜ ಸಹಾಯ ಮಾಡುತ್ತದೆ.
ಇನ್ಸೋಮಿನಿಯಾ ಕಾಯಿಲೆಗೆ ಪರಿಹಾರ: ನಿದ್ರಾಹೀನತೆ. ನಿದ್ರೆ ಮಾಡಲು ತೊಂದರೆ ಅನುಭವಿಸುತ್ತಿದ್ದರು ಸುಗಂಧರಾಜ ಹೂವನ್ನ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಜೊತೆಗೆ ಮಿಶ್ರಣ ಮಾಡಿ ಸೇವಿಸಿದ್ರೆ ಕ್ರಮೇಣ ನಿದ್ರಾಹೀನತೆ ಅಥವಾ ಇನ್ಸೋಮಿನಿಯಾ ಕಾಯಿಲೆಯಿಂದ ಬೇಗನೆ ಗುಣಮುಖರಾಗಬಹುದು.
ವಿಶ್ರಾಂತಿ: ಸುಗಂಧರಾಜ ವಿಶ್ರಾಂತಿಸಲು ಸಹಾಯ ಮಾಡುತ್ತದೆ. ಒತ್ತಡದಲ್ಲಿರುವವರು, ಜಿಗುಪ್ಸೆಗೆ ಒಳಗಾಗಿರುವವರಿಗೆ ಸುಗಂಧ ರಾಜ ಹೂವಿನ ಪರಿಮಳದಿಂದ ವಿಶ್ರಾಂತಿ, ಶಾಂತಿ, ನೆಮ್ಮದಿ ಸಿಗುತ್ತದೆ.
ಶಕ್ತಿ ವೃದ್ಧಿ : ದೇಹದ ಶಕ್ತಿ ವೃದ್ಧಿಸುವಲ್ಲಿ ಸುಗಂಧರಾಜ ಸಹಾಯಕಾರಿ. 50 ಗ್ರಾಂ ಬಟಾಣಿ, 50 ಸುಗಂಧರಾಜ ದಳಗಳು, 1 ಮೊಟ್ಟೆ ಹಾಗೂ 100 grams of ಸೀಗಡಿ ಮತ್ತು ಬೆಳ್ಳುಳ್ಳಿ ಮಿಶ್ರಂ ಮಾಡಿ ತಿಂದರೆ ಕ್ರಮೇಣ ದೇಹದಲ್ಲಿ ಶಕ್ತಿಯ ಪ್ರಮಾಣ ವೃದ್ಧಿ ಆಗುತ್ತೆ.