ADVERTISEMENT
Monday, March 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ಸುಲಭ ಹಾಗೂ ಬಹಳ ರುಚಿಕರ ಸಾರುಗಳ ರೆಸಿಪಿಗಳು..!

Namratha Rao by Namratha Rao
December 13, 2021
in Cooking, Newsbeat, Sports
Share on FacebookShare on TwitterShare on WhatsappShare on Telegram

5 ಸುಲಭ ಹಾಗೂ ಬಹಳ ರುಚಿಕರ ಸಾರುಗಳ ರೆಸಿಪಿಗಳು..!

ಪದಾರ್ಥಗಳು
ತರಕಾರಿ – ಬದನೆ , ಆಲೂಗಡ್ಡೆ , ಬೀನ್ಸ್ , ಕ್ಯಾರೋಟ್ ( ಆಪ್ಷನಲ್ ) , ಬೇಕಾದರೆ ಮೂಲಂಗಿ , ಹಾಗೂ ನಿಮ್ಮ ಇಷ್ಟದ ತರಕಾರಿಗಳು
ಟೊಮ್ಯಾಟೋ , ಈರುಳ್ಳಿ , ಬೆಳ್ಳುಳ್ಳಿ , ಕರಿಬೇವು , ಕೊತ್ತಂಬರಿ ಸೊಪ್ಪು
ತೊಗರಿಬೇಳೆ 1 ಕಪ್ – ಅರ್ಧ ಕಪ್ ಹೆಸರುಬೇಳೆ
ಎಣ್ಣೆ ಒಗ್ಗರಣೆಗೆ , ಉಪ್ಪು ರುಚಿಗೆ ತಕ್ಕಷ್ಟು
ತೆಂಗಿನ ಕಾಯಿ – ಬೇಕಿದ್ದಲ್ಲಿ
ಮನೆಯಲ್ಲಿ ಮಾಡಿದ ಸಾಂಬರ್ ಪುಡಿ – ಇಲ್ಲದವಾದ್ರೆ ಖಾರದ ಪುಡಿ – ಧನ್ಯಾಪುಡಿ ಬಳಸಬಹುದು
ಅರಿಶಿಣ , ಸಾಸಿವೆ, (ಹಿಂಗು ಆಪ್ಷನಲ್) ಒಗ್ಗರಣೆಗೆ
ಹುಣಸೆಹುಳಿ – ಸ್ವಲ್ಪ

ತರಕಾರಿ ಹುಳಿ ಸಾರು ಸಾಮಾನ್ಯವಾಗಿ ಎಲ್ಲರೂ ತುಂಬಾ ಇಷ್ಟ ಪಡ್ತಾರೆ.. ಆದ್ರೆ ಕೆಲವೊಮ್ಮೆ ಮಾಡಲು ಹೆಚ್ಚು ಸಮಯ ಹಿಡಿಯುತ್ತೆ.. ಆದ್ರೆ ನಾವು ಸುಲಭವಾಗಿಯೇ ಮಾಡುವ ವಿಧಾನವನ್ನ ತಿಳಿಸಯೋಣ.. ಮೊದಲಿಗೆ ಹುಣಸೆಹುಳಿ ನೆನೆಸೆಕೊಳ್ಳಿ.
ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಹೆಚ್ಚಿಟ್ಟುಕೊಂಡ ತರಕಾರಿ ಬೇಳೆ ಹಾಕಿ ಮುಳುಗವಷ್ಟು ಅಥವ ಬೇಯಿಸುವಷ್ಟು ನೀರು ಹಾಕಿ ಅದಕ್ಕೆ ಒಂದು ಸ್ಪೂನ್ ಎಣ್ಣೆ ಹಾಕಿ , ಅರ್ಧ ಸ್ಪೂನ್ ಅರಿಶಿಣ ಹಾಕಿ , ಒಂದೆರೆಡು ಮೂರು ನಿಮ್ಮ ರುಚಿಗೆ ಬೇಕಾದಷ್ಟು ಟಮ್ಯಾಟೋ ಪೀಸ್ ಮಾಡದೇ ಹಾಗೆಯೇ ಹಾಕಿ.. ಅರ್ಧ ಈರುಳ್ಳಿ ಸ್ವಲ್ಪ ದಪ್ಪದಪ್ಪ ಪೀಸ್ ಗಳಾಗಿ ಹೆಚ್ಚಿ ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ , ಮೀಡಿಯಮ್ ಫ್ಲೇಮ್ ನಲ್ಲಿ ಬೇಯಿಸಿ.. 2 ವಿಷಲ್ ಬಂದ ನಂತರ ಆಫ್ ಮಾಡಿ ಸ್ಟೀಮ್ ಇಳಿಯಲು ಬಿಡಿ..

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಇತ್ತ ಒಂದು ಮಿಕ್ಸಿ ಜಾರಿಗೆ ನೆನಸಿಟ್ಟ ಉಣಸೆಹುಳಿಯನ್ನ ಸ್ವಲ್ಪ ನೀರಿನ ಜೊತೆಗೆ ಹಾಕಿಕೊಳ್ಳಿ.. ಅದಕ್ಕೆ ಒಂದೆರೆಡು ಬೆಳ್ಳುಳ್ಳಿ ಎಸಳು , ಸಾಂಬರ್ ಪುಡಿ ಅಥವ ಖಾರದ ಪುಡಿ – ಧನ್ಯಪುಡಿ ರುಚಿಗೆ ಅನುಗುಣವಾಗಿ ಹಾಕಿಕೊಳ್ಳಿ , ಹೆಚ್ಚಿಟ್ಟ ಕೊತ್ತಂಬರಿಯಲ್ಲಿ ಅರ್ಧ ಜಾರಿಗೆ ಹಾಕಿ ಅರ್ಧ ಪಕ್ಕಕ್ಕೆ ಎತ್ತಿಡಿ , ಬೇಕಿದ್ದಲ್ಲಿ ಸ್ವಲ್ಪ ತೆಂಗಿನಕಾಯಿ ಹಾಕಿ , ಈಗ ಕುಕ್ಕರ್ ಮುಚ್ಚಳ ತೆಗೆದು ಅದರಿಂದ ಟೊಮ್ಯೋಟೋ ಪ್ರತ್ಯೇಕಿಸಿ ಅದನ್ನ ಜಾರಿಗೆ ಹಾಕಿಕೊಳ್ಳಿ 2 ನಿಮಿಷ ಆರಲು ಬಿಟ್ಟು ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ..

ಈಗ ಒಂದು ದಪ್ಪ ತಳದ ಸಾರು ಮಾಡುವ ಪಾತ್ರೆಯನ್ನ ಕಾಯಲು ಇಡಿ.. ಅದಕ್ಕೆ ಎಣ್ಣೆ ಹಾಕಿ , ನಂತಯರ ಸಾಸಿವೆ ಹಾಕಿ, ಸಾಸಿವೆ ಸಂಪೂರ್ಣ ಸಿಡಿದ ನಂತರ , ಅರಿಶಿಣ ಸೇರಿಸಿ, ಕರಿಬೇವು ಹಾಕಿ , ಸಿಪ್ಪೆ ಸಮೇತ ಚೆಚ್ಚಿದ 3-4 ಬಬೆಳ್ಳುಳ್ಳಿ ಎಸಳು ಹಾಕಿ , ಹೆಚ್ಚಿಟ್ಟಿದ್ದ 1 ದಪ್ಪ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ , ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಬಾಡಿಸಿ.. 1 ನಿಮಿಷ ಹೀಗೆ ಬಾಡಿಸಿದ ಮೇಲೆ ಇದಕ್ಕೆ ತರಕಾರಿ ಬೇಳೆ ಜೊತೆಗೆ ಬೇಯಿಸಿದ ನೀರನ್ನ ಹಾಕಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಜೊತೆಗೆ ತೆಳು ಅಥವ ಗಟ್ಟಿ ಎಷ್ಟು ಪ್ರಮಾಣದ ಅಗತ್ಯತೆ ಇದೆಯೋ ಅಷ್ಟು ನೀರು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿ 8-10 ನಿಮಿಷ ಮೀಡಿಯಮ್ ಫ್ಲೇಮ್ ನಲ್ಲಿ ಚನ್ನಾಗಿ ಕುದಿಯಲು ಬಿಡಿ.. ಅದಕ್ಕೆ ಮೇಲಿಂದ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಪ್ಲೇಟ್ ಅನ್ನು ಅರ್ಧ ಮುಚ್ಚಿ ಬಿಡಿ .. ( ಮೂರ್ತಿ ಮುಚ್ಚಿದಲ್ಲಿ ಉಕ್ಕಿಬಿಡುತ್ತದೆ)

ಒಂದು 10 -15 ನಿಮಿಷದೊಳಗಡೆ ಸ್ವಲ್ಪ ಎಣ್ಣೆ ತೇಲುವುದು ಗೊತ್ತಾಗುತ್ತದೆ. ಆಗ ಇದು ಬೆಂದಿದೆ ಎಂದರ್ಥ.. ನಂತರ ಫ್ಲೇಮ್ ಆಫ್ ಮಾಡಿ.. ಗಟ್ಟಿಯಾಗಿ ಮಾಡಿದಲ್ಲಿ ಮುದ್ದೆಗೆ ಈ ಸಾರು ಬೊಂಬಾಟ್ ಕಾಂಬಿನೇಷನ್.. ಅದೇ ತೆಳುವಾಗಿ ಮಾಡಿದ್ರೆ ಅನ್ನಕ್ಕೂ ಸೂಪರ್..

ಸುಲಭವಾಗಿ ಈ ರೀತಿ 10 ನಿಮಿಷದಲ್ಲಿ, ಮಾಡಿ ರುಚಿಕರ ರಸಂ..!

 

ರುಚಿಕರ ಹಾಗೂ ಸುಲಭವಾಗಿ ರಸಂ ಮಾಡಲು ಹೆಚ್ಚು ಪದಾರ್ಥಗಳ ಅವಶ್ಯಕಥೆ ಇಲ್ಲ…
ಇಲ್ಲಿ ಸುಮಾರು 4 ಜನರಿಗೆ ಆಗುವಷ್ಟು ರಸಂ ಮಾಡಲಿಕ್ಕೆ ಬೇಕಾದ ಪದಾರ್ಥಗಳನ್ನ ಕೊಡಲಾಗಿದೆ.

ಅರ್ಧಕಪ್ಪು ಕಾಳು ಮೆಣಸು , ಜೀರಿಗೆ

ಅರ್ಧ ಸ್ಪೂನ್ ಅಡುಗೆ ಅರಿಶಿಣ

ಸಾಸಿವೆ

ರುಚಿಕೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ ಬೇಕಾದಷ್ಟು ಎಣ್ಣೆ

3- 4 ಟೊಮ್ಯಾಟೋ

ಬೆಳ್ಳುಳ್ಳಿ –  10-15 ಎಸಳುಗಳು

ಕೊತ್ತಂಬರಿ ಸೊಪ್ಪು

ಉಣಸೆಹುಳಿ ಒಂದು ನಿಂಬೆ ಗಾತ್ರದಷ್ಟು

ಖಾರದ ಒಣ ಮೆಣಸಿನ ಕಾಯಿ –  8 -12

ಕರಿಬೇವು

ಮೊದಲಿಗೆ ಒಂದು ದೊಡ್ಡ ಬಟ್ಟಲಲ್ಲಿ ( ಕೈ ಆಡಿಸಲು ಸುಲಭವಾಗಬೇಕು ) ಉಣಸೆಹುಳಿ ನೆನಸಿ. ಮತ್ತೊಂದೆಡೆ ಒಣಮೆಣಸಿನ ಕಾಯಿಗಳನ್ನ ಮುರಿದಿಟ್ಟುಕೊಳ್ಳಿ. ಕೊತ್ತಂಬರಿ ಸೊಬ್ಬನ್ನು ಚೆನ್ನಾಗಿ ತೊಳೆದು ದೊಡ್ಡ ದೊಡ್ಡ ಗಾತ್ರದಲ್ಲೇ ಕಟ್ ಮಾಡಿ.. ನೆನೆಸಿಟ್ಟಿದ್ದ ಉಣಸೆ ಹುಳಿಯನ್ನ ಒಂದು 5 ನಿಮಗಳ ನಂತರ ಚೆನ್ನಾಗಿ ಸ್ವಚ್ಛ ಕೈಗಳಿಂದ ಕಿವುಚಿ. ಆನಂತರ ಅದರಿಂದ ಹುಣಸೆ ನಾರು , ಬೀಜನ್ನ ಬೇರ್ಪಡಿಸಿ ತೆಗೆದುಬಿಡಿ. ನಂತರ ಅದಕ್ಕೆ ಟೊಮ್ಯಾಟೋವನ್ನ  4 – 4 ಕಟ್ ಗಳಾಗಿ ಪೀಸ್ ಮಾಡಿ ಹುಣಸೆ ರಸಕ್ಕೆ ಹಾಕಿ ಅದರೊಟ್ಟಿಗೆ ಕಿವುಚಿ… ಚೆನ್ನಾಗಿ ಕಿವುಚಿದ ನಂತರ ಅದಕ್ಕೆ ಕಟ್ ಮಾಡಿಟ್ಟ ಕೊತ್ತಂಬರಿ ಸೊಪ್ಪನ್ನು ಹಾಕಿ. ಮತ್ತೊಂದೆಡೆ ಬೆಳ್ಳುಳ್ಳಿಯನ್ನ ಸಿಪ್ಪೆ ಸಮೇತ ಜೆಜ್ಜಿ ಇಟ್ಟುಕೊಳ್ಳಿ. ಬಳಿಕ ಜಾರ್ ನಲ್ಲಿ ಹಾಕಿ ಅರ್ಧ ಕಪ್ ಅಷ್ಟು ಜೀರಿಗೆ ಮೆಣಸನ್ನು ರುಬ್ಬಿ ನುಣ್ಣಗೆ ಪುಡಿ ಮಾಡಿ.. ಬಳಿಕ ಅದರಿಂದ ನಿಮಗೆ ಎಷ್ಟು ಪ್ರಮಾಣದಲ್ಲಿ ಖಾರ ಬೇಕೋ ನೋಡಿ ಅದನ್ನ ಕಡಿಮೆ ಹೆಚ್ಚು ಮಾಡಿಕೊಳ್ಳಬಹುದು. ಅರ್ಧ ಕಪ್ ಅಷ್ಟು ಪೂರ್ತಿ ಜೀರಿಗೆ ಮೆಣಸು ಪುಡಿ ಹಾಕಿದ್ರೆ ರುಚಿ ಸರಿಯಾಗಿ ಬರುತ್ತದೆ.  ಈ ಪುಡಿಯನ್ನ ಹುಣಸೆ ಟೊಮ್ಯಾಟೋ ಮಿಶ್ರದ ಜೊತೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಒಗ್ಗರಣೆಗೆ ಸಾರು ಮಾಡಬಯಸುವ ಪಾತ್ರೆಯನ್ನ ಗ್ಯಾಸ್ ಮೇಲೆ ಕಾಯಲು ಇಡಿ.  ಒಗ್ಗರಣೆಯಾಗುವ ತನಕ ಸಣ್ಣ ಉರಿಯಲ್ಲೇ ಇರಬೇಕು.. ಪಾತ್ರೆ ಕಾಯ್ದ ನಂತರ 4- 5 ಸ್ಪೂನ್  ಎಣ್ಣೆ ಹಾಕಿ. ನಂತರ ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಚಿಟ ಪಟ ಸಿಡಿಯುವ ಸಂಪೂರ್ಣವಾಗಿ ನಿಂತ ನಂತರ ಅರಿಶಿಣ ಹಾಕಿ. ನಂತರ ತಕ್ಷಣ ತಕ್ಷಣವೇ ಬೇರೆ ಪದಾರ್ಥ ಸೀಯುವ ಮೊದಲೇ ಕರಿಬೇವು, ಒಣಮೆಣಸಿನ ಕಾಯಿ , ಚೆಟ್ಟಿಟ್ಟ  ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ..  ಒಗ್ಗರಣೆಯ ಗಮ ಚೆನ್ನಾಗಿ ಬಂದ ತಕ್ಷಣವೇ ಅದಕ್ಕೆ ಹುಣಸೆ ಟಮಾಟೋ ಮಿಶ್ರಣವನ್ನ ಸೇರಿಸಿ. ಈಗ ಹುಣಸೆ ಮಿಶ್ರಣದ 4 -5 ಪಟ್ಟು ನೀರನ್ನ ಪಾತ್ರೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈ ಹಂತದಲ್ಲಿ ಬೇಕಿದ್ದರೆ ಧನ್ಯಾ ಪುಡಿ, ಹಾಗೂ ಒಂದು ಸ್ಪೂನ್ ಖಾರದ ಪುಡಿ ಅಥವ ಸಾಂಬರ್ ಪುಡಿ ಹಾಕಬಹುದು. ಆದ್ರೆ ಹಾಕಲೇಬೇಕೆಂದೇನಿಲ್ಲ. ಇದನ್ನ ಚನ್ನಾಗಿ ಕುದಿಯಲು ಬಿಡಿ. ಸುಮಾರು 10 ನಿಮಿಗಳಾದ್ರೂ ರಸಂ ಕುದಿಯಬೇಕು. ಕುದ್ದು ರೆಡಿಯಾದ ನಂತರ ಎಣ್ಣೆ  ಮೇಲೆ ಬಂದಿರುತ್ತದೆ. ಆಗ ರಸಂ ರೆಡಿ ಎಂದರ್ಥ.. ಇದನ್ನ ಅನ್ನದ ಜೊತೆಗೆ ಅಷ್ಟೇ ಅಲ್ಲದೇ ಹಾಗೆಯೇ ಸೂಪ್ ರೀತಿಯೂ ಅಥವ ನೆಗಡಿ , ಜ್ವರವಿದ್ದಾಗಲೂ ಹಾಗೆಯೇ ಕುಡಿಯಬಹುದು. ರುಚಿ ಜೊತೆಗೆ ಆರೋಗ್ಯಕರವೂ ಹೌದು.

ಬೀನ್ಸ್ ಮಜ್ಜಿಗೆ ಹುಳಿ

ಬೇಕಾಗುವ ಸಾಮಗ್ರಿಗಳು

ಅಕ್ಕಿ – 1 ಚಮಚ
ಕಡ್ಲೆಬೇಳೆ ‌- 1 ಚಮಚ
ಜೀರಿಗೆ – 1 ಚಮಚ
ಬೀನ್ಸ್ – 1/4 ಕೆ.ಜಿ
ತೆಂಗಿನಕಾಯಿ ತುರಿ – 1/4 ಕಪ್
ಹಸಿಮೆಣಸಿನಕಾಯಿ – 2
ಗಟ್ಟಿ ಮೊಸರು – 1/2 ಕಪ್
ಒಗ್ಗರಣೆಗೆ
ತುಪ್ಪ – 1 ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಕರಿಬೇವು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe prepare beans majjige huli
ಮಾಡುವ ವಿಧಾನ

ಮೊದಲು ಅಕ್ಕಿ ಮತ್ತು ಕಡ್ಲೆಬೇಳೆ ಗಳನ್ನು ಚೆನ್ನಾಗಿ ತೊಳೆದು ಮುಳುಗುವಷ್ಟು‌ ನೀರು‌ ಹಾಕಿ 1- 2ಗಂಟೆಗಳ ಕಾಲ ನೆನೆಯಲು ಬಿಡಿ.
ನಂತರ ಬೀನ್ಸ್ ತೊಟ್ಟು ನಾರು ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಬೀನ್ಸ್ ಅನ್ನು ಬೇಯಿಸಿ ಇಟ್ಟುಕೊಳ್ಳಿ.
ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ನೆನೆಸಿಟ್ಟ ಅಕ್ಕಿ, ಕಡ್ಲೆಬೇಳೆ, ಜೀರಿಗೆ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣವನ್ನು ಬೇಯಿಸಿಟ್ಟುಕೊಂಡ ಬೀನ್ಸ್ ಪಾತ್ರೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಈಗ ಗ್ಯಾಸ್ ನಿಂದ ಕೆಳಗಿಳಿಸಿ ಮೊಸರು ಬೆರೆಸಿ.
ನಂತರ ಒಗ್ಗರಣೆಗೆ ತುಪ್ಪ ಬಿಸಿ ಮಾಡಿ. ಬಿಸಿಯಾದ ಬಳಿಕ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಜೀರಿಗೆ, ಕರಿಬೇವು, ಇಂಗು ಸೇರಿಸಿ ಬೀನ್ಸ್ ಮಜ್ಜಿಗೆ ಹುಳಿ ಜೊತೆಗೆ ಮಿಶ್ರ ‌ಮಾಡಿ. ಈಗ ಬೀನ್ಸ್ ಮಜ್ಜಿಗೆ ಹುಳಿ ಸವಿಯಲು ಸಿದ್ಧವಾಗಿದೆ.

ಉಡುಪಿ ಶೈಲಿಯ ಮಾವಿನ ಕಾಯಿ ಸಾರು ಅಥವಾ ಅಪ್ಪೆ ಸಾರು

ಬೇಕಾಗುವ ಸಾಮಗ್ರಿಗಳು

ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ – 1ಕಪ್
ಹಸಿಮೆಣಸು – 3
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 1ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಉದ್ದಿನ ಬೇಳೆ – 1/4 ಚಮಚ
ಕೆಂಪುಮೆಣಸು – 1
ಕರಿಬೇವು – 2 ಎಸಳು
ಇಂಗು ಚಿಟಿಕೆಯಷ್ಟು
ಅರಿಶಿನ ಚಿಟಿಕೆಯಷ್ಟು

ಮಾಡುವ ವಿಧಾನ

ಮೊದಲಿಗೆ ಮಾವಿನಕಾಯಿ, ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ, ಅರ್ಧ ಕಪ್ ನೀರು ಸೇರಿಸಿ ಕುಕ್ಕರ್‌ನಲ್ಲಿ 1 ವಿಸಲ್ ಹೊಡೆಯುವವರೆಗೆ ಬೇಯಿಸಿ. ಅದು ತಣ್ಣಗಾದ ಬಳಿಕ ನಯವಾಗಿ ರುಬ್ಬಿ.

ನಂತರ ಇದನ್ನು ಪಾತ್ರೆಗೆ ವರ್ಗಾಯಿಸಿ. ರುಚಿಗೆ ತಕ್ಕಂತೆ ಉಪ್ಪು (ಬೇಕಿದ್ದರೆ ಸಣ್ಣ ತುಂಡು ಬೆಲ್ಲ) ಮತ್ತು ಸಾಕಷ್ಟು ನೀರು ಸೇರಿಸಿ 2 ನಿಮಿಷ ಕುದಿಸಿ.

ನಂತರ ಪಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಉದ್ದಿನ ಬೇಳೆ, ಜೀರಿಗೆ, ಕರಿಬೇವಿನ ಎಲೆ, ಕೆಂಪು ಮೆಣಸು, ಅರಿಶಿನ, ಇಂಗು ಸೇರಿಸಿ ಒಗ್ಗರಣೆ ಕೊಡಿ.
ಈಗ ಮಾವಿನಕಾಯಿ ರಸಂ ಅಥವಾ ಅಪ್ಪೆ ಸಾರು ಸಿದ್ಧವಾಗಿದೆ.

ರೆಸ್ಟೋರೆಂಟ್ ಸ್ಟೈಲ್ ಟಿಫಿನ್ ಸಾಂಬಾರು

ಬೇಕಾಗುವ ಪದಾರ್ಥಗಳು

½ ಕಪ್ ತೊಗರಿ ಬೇಳೆ /
½ ಕಪ್ ಹೆಸರು ಬೇಳೆ
½ ಟೀಸ್ಪೂನ್ ಅರಿಶಿನ ಪುಡಿ

ಸಾಂಬಾರು ಮಸಾಲಾಗೆ

1 ಟೀಸ್ಪೂನ್ ಕಡ್ಲೆಬೇಳೆ
1 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಕರಿಮೆಣಸು
8-10 ಕರಿಬೇವಿನ ಸೊಪ್ಪು
1-2 ಟೀಸ್ಪೂನ್ ಮೆಂತ್ಯ
4-5 ಒಣ ಕೆಂಪು ಮೆಣಸು
1-2 ಟೀಸ್ಪೂನ್ ಎಣ್ಣೆ

Saakshatv cooking recipe Restaurant style tiffin sambar

ಇತರ ಪದಾರ್ಥಗಳು

½ ಕಪ್ ಕತ್ತರಿಸಿದ ಬದನೆಕಾಯಿ
½ ಕಪ್ ಕತ್ತರಿಸಿದ ಈರುಳ್ಳಿ
½ ಕಪ್ ಕತ್ತರಿಸಿದ ಆಲೂಗಡ್ಡೆ
1 ಕಪ್ ಕತ್ತರಿಸಿದ ಟೊಮ್ಯಾಟೊ
1 ಕಪ್ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಕ್ಯಾರೆಟ್
1 ಕಪ್ ಕತ್ತರಿಸಿದ ನುಗ್ಗೆಕಾಯಿ (optional)
¼ ಕಪ್ ಕತ್ತರಿಸಿದ ಕುಂಬಳಕಾಯಿ (optional)
1-2 ಟೀಸ್ಪೂನ್ ಹುಣಸೆಹಣ್ಣಿನ ರಸ
1 ಸಣ್ಣ ತುಂಡು ಬೆಲ್ಲ
1 ಟೀಸ್ಪೂನ್ ಅರಿಶಿನ ಪುಡಿ
½ ಟೀಸ್ಪೂನ್ ಸಾಸಿವೆ
½ ಟೀಸ್ಪೂನ್ ಜೀರಿಗೆ
4-5 ಕರಿಬೇವಿನ ಸೊಪ್ಪು
1 ಟೀಸ್ಪೂನ್ ಉದ್ದಿನ ಬೇಳೆ
ಪಿಂಚ್ ಅಸಫೊಟಿಡಾ / ಹಿಂಗ್
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಎಣ್ಣೆ

ಮಾಡುವ ‌ವಿಧಾನ

ಸಾಂಬಾರು ಮಸಾಲಾಗೆ

ಸಣ್ಣ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

ಜೀರಿಗೆ, ಕಡ್ಲೆಬೇಳೆ, ಮೆಂತ್ಯ ಬೀಜ ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಹುರಿದ ನಂತರ ಒಣ ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಕರಿಮೆಣಸು, ಕೊತ್ತಂಬರಿ ಬೀಜ ಸೇರಿದಂತೆ ಎಲ್ಲಾ ಮಸಾಲಾ ಪದಾರ್ಥಗಳನ್ನು ಸೇರಿಸಿ ಪರಿಮಳ ಬರುವ ತನಕ ಕೆಲವು ನಿಮಿಷಗಳ ಕಾಲ ಹುರಿಯಿರಿ.

ಇದನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದನ್ನು ಬ್ಲೆಂಡರ್ ಅಥವಾ ಮಿಕ್ಸರ್ ಆಗಿ ನಯವಾಗಿ ನೀರು ಸೇರಿಸದೆ ಪುಡಿ ರೂಪದಲ್ಲಿ ಗ್ರೈಂಡ್ ಮಾಡಿ ಪಕ್ಕಕ್ಕೆ ಇರಿಸಿ.

Saakshatv cooking recipe Restaurant style tiffin sambar

ಎರಡೂ ಬೇಳೆ‌ಗಳನ್ನು 2-3 ಬಾರಿ ತೊಳೆಯಿರಿ. ನಂತರ ಅರಿಶಿನ ಪುಡಿ, ಅಗತ್ಯವಿರುವ ನೀರು (ಸುಮಾರು 2 ಕಪ್) ಸೇರಿಸಿ ತದನಂತರ ಬೇಯಿಸಿ.

ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಜೀರಿಗೆ, ಸಾಸಿವೆ, ಒಣ ಕೆಂಪು ಮೆಣಸು, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು, ಪಿಂಚ್ ಇಂಗು ಸೇರಿಸಿ, ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.

ಈಗ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮತ್ತು ಮೃದುವಾಗುವವರೆಗೆ ಮತ್ತೆ ಹುರಿಯಿರಿ.

ನಂತರ ಅದಕ್ಕೆ ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಸೇರಿಸಿ.‌ ಈಗ ಅದಕ್ಕೆ ತಯಾರಿಸಿ ಇಟ್ಟುಕೊಂಡ ಸಾಂಬಾರು ಮಸಾಲಾ, ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ 1 ಅಥವಾ 1 ½ ಕಪ್ ನೀರು ಸೇರಿಸಿ, ಅದನ್ನು ಕುದಿಸಿ, ಮುಚ್ಚಲ ಮುಚ್ಚಿ ತರಕಾರಿಗಳನ್ನು ಬೇಯಿಸಿ.

ತರಕಾರಿಗಳು ಬೆಂದ ನಂತರ ಹುಣಸೆ ರಸ, ಬೆಲ್ಲ, ಬೇಯಿಸಿದ ಬೇಳೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಅದನ್ನು ಮಧ್ಯಮ ಉರಿಯಲ್ಲಿ 3 – 4 ತನಕ ಕುದಿಸಿ. ರೆಸ್ಟೋರೆಂಟ್ ಸ್ಟೈಲ್ ಟಿಫಿನ್ ಸಾಂಬಾರು ಸಿದ್ಧವಾಗಿದೆ.

ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಈ ಸಾಂಬಾರನ್ನು ಅನ್ನ, ದೋಸೆ, ಇಡ್ಲಿ ಜೊತೆ ಸವಿಯಲು ಚೆನ್ನಾಗಿರುತ್ತದೆ.

 

Tags: #saakshatvcookingFoodgravy recipiesrasamsamabar
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram