ಸುಲಭವಾಗಿ ಈ ರೀತಿ 10 ನಿಮಿಷದಲ್ಲಿ, ಮಾಡಿ ರುಚಿಕರ ರಸಂ..!
ರುಚಿಕರ ಹಾಗೂ ಸುಲಭವಾಗಿ ರಸಂ ಮಾಡಲು ಹೆಚ್ಚು ಪದಾರ್ಥಗಳ ಅವಶ್ಯಕಥೆ ಇಲ್ಲ… ಇಲ್ಲಿ ಸುಮಾರು 4 ಜನರಿಗೆ ಆಗುವಷ್ಟು ರಸಂ ಮಾಡಲಿಕ್ಕೆ ಬೇಕಾದ ಪದಾರ್ಥಗಳನ್ನ ಕೊಡಲಾಗಿದೆ.
ಅರ್ಧಕಪ್ಪು ಕಾಳು ಮೆಣಸು , ಜೀರಿಗೆ
ಅರ್ಧ ಸ್ಪೂನ್ ಅಡುಗೆ ಅರಿಶಿಣ
ಸಾಸಿವೆ
ರುಚಿಕೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾದಷ್ಟು ಎಣ್ಣೆ
3- 4 ಟೊಮ್ಯಾಟೋ
ಬೆಳ್ಳುಳ್ಳಿ – 10-15 ಎಸಳುಗಳು
ಕೊತ್ತಂಬರಿ ಸೊಪ್ಪು
ಉಣಸೆಹುಳಿ ಒಂದು ನಿಂಬೆ ಗಾತ್ರದಷ್ಟು
ಖಾರದ ಒಣ ಮೆಣಸಿನ ಕಾಯಿ – 8 -12
ಮೊದಲಿಗೆ ಒಂದು ದೊಡ್ಡ ಬಟ್ಟಲಲ್ಲಿ ( ಕೈ ಆಡಿಸಲು ಸುಲಭವಾಗಬೇಕು ) ಉಣಸೆಹುಳಿ ನೆನಸಿ. ಮತ್ತೊಂದೆಡೆ ಒಣಮೆಣಸಿನ ಕಾಯಿಗಳನ್ನ ಮುರಿದಿಟ್ಟುಕೊಳ್ಳಿ. ಕೊತ್ತಂಬರಿ ಸೊಬ್ಬನ್ನು ಚೆನ್ನಾಗಿ ತೊಳೆದು ದೊಡ್ಡ ದೊಡ್ಡ ಗಾತ್ರದಲ್ಲೇ ಕಟ್ ಮಾಡಿ.. ನೆನೆಸಿಟ್ಟಿದ್ದ ಉಣಸೆ ಹುಳಿಯನ್ನ ಒಂದು 5 ನಿಮಗಳ ನಂತರ ಚೆನ್ನಾಗಿ ಸ್ವಚ್ಛ ಕೈಗಳಿಂದ ಕಿವುಚಿ. ಆನಂತರ ಅದರಿಂದ ಹುಣಸೆ ನಾರು , ಬೀಜನ್ನ ಬೇರ್ಪಡಿಸಿ ತೆಗೆದುಬಿಡಿ. ನಂತರ ಅದಕ್ಕೆ ಟೊಮ್ಯಾಟೋವನ್ನ 4 – 4 ಕಟ್ ಗಳಾಗಿ ಪೀಸ್ ಮಾಡಿ ಹುಣಸೆ ರಸಕ್ಕೆ ಹಾಕಿ ಅದರೊಟ್ಟಿಗೆ ಕಿವುಚಿ… ಚೆನ್ನಾಗಿ ಕಿವುಚಿದ ನಂತರ ಅದಕ್ಕೆ ಕಟ್ ಮಾಡಿಟ್ಟ ಕೊತ್ತಂಬರಿ ಸೊಪ್ಪನ್ನು ಹಾಕಿ. ಮತ್ತೊಂದೆಡೆ ಬೆಳ್ಳುಳ್ಳಿಯನ್ನ ಸಿಪ್ಪೆ ಸಮೇತ ಜೆಜ್ಜಿ ಇಟ್ಟುಕೊಳ್ಳಿ. ಬಳಿಕ ಜಾರ್ ನಲ್ಲಿ ಹಾಕಿ ಅರ್ಧ ಕಪ್ ಅಷ್ಟು ಜೀರಿಗೆ ಮೆಣಸನ್ನು ರುಬ್ಬಿ ನುಣ್ಣಗೆ ಪುಡಿ ಮಾಡಿ.. ಬಳಿಕ ಅದರಿಂದ ನಿಮಗೆ ಎಷ್ಟು ಪ್ರಮಾಣದಲ್ಲಿ ಖಾರ ಬೇಕೋ ನೋಡಿ ಅದನ್ನ ಕಡಿಮೆ ಹೆಚ್ಚು ಮಾಡಿಕೊಳ್ಳಬಹುದು. ಅರ್ಧ ಕಪ್ ಅಷ್ಟು ಪೂರ್ತಿ ಜೀರಿಗೆ ಮೆಣಸು ಪುಡಿ ಹಾಕಿದ್ರೆ ರುಚಿ ಸರಿಯಾಗಿ ಬರುತ್ತದೆ. ಈ ಪುಡಿಯನ್ನ ಹುಣಸೆ ಟೊಮ್ಯಾಟೋ ಮಿಶ್ರದ ಜೊತೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಒಗ್ಗರಣೆಗೆ ಸಾರು ಮಾಡಬಯಸುವ ಪಾತ್ರೆಯನ್ನ ಗ್ಯಾಸ್ ಮೇಲೆ ಕಾಯಲು ಇಡಿ. ಒಗ್ಗರಣೆಯಾಗುವ ತನಕ ಸಣ್ಣ ಉರಿಯಲ್ಲೇ ಇರಬೇಕು.. ಪಾತ್ರೆ ಕಾಯ್ದ ನಂತರ 4- 5 ಸ್ಪೂನ್ ಎಣ್ಣೆ ಹಾಕಿ. ನಂತರ ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಚಿಟ ಪಟ ಸಿಡಿಯುವ ಸಂಪೂರ್ಣವಾಗಿ ನಿಂತ ನಂತರ ಅರಿಶಿಣ ಹಾಕಿ. ನಂತರ ತಕ್ಷಣ ತಕ್ಷಣವೇ ಬೇರೆ ಪದಾರ್ಥ ಸೀಯುವ ಮೊದಲೇ ಕರಿಬೇವು, ಒಣಮೆಣಸಿನ ಕಾಯಿ , ಚೆಟ್ಟಿಟ್ಟ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.. ಒಗ್ಗರಣೆಯ ಗಮ ಚೆನ್ನಾಗಿ ಬಂದ ತಕ್ಷಣವೇ ಅದಕ್ಕೆ ಹುಣಸೆ ಟಮಾಟೋ ಮಿಶ್ರಣವನ್ನ ಸೇರಿಸಿ. ಈಗ ಹುಣಸೆ ಮಿಶ್ರಣದ 4 -5 ಪಟ್ಟು ನೀರನ್ನ ಪಾತ್ರೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈ ಹಂತದಲ್ಲಿ ಬೇಕಿದ್ದರೆ ಧನ್ಯಾ ಪುಡಿ, ಹಾಗೂ ಒಂದು ಸ್ಪೂನ್ ಖಾರದ ಪುಡಿ ಅಥವ ಸಾಂಬರ್ ಪುಡಿ ಹಾಕಬಹುದು. ಆದ್ರೆ ಹಾಕಲೇಬೇಕೆಂದೇನಿಲ್ಲ. ಇದನ್ನ ಚನ್ನಾಗಿ ಕುದಿಯಲು ಬಿಡಿ. ಸುಮಾರು 10 ನಿಮಿಗಳಾದ್ರೂ ರಸಂ ಕುದಿಯಬೇಕು. ಕುದ್ದು ರೆಡಿಯಾದ ನಂತರ ಎಣ್ಣೆ ಮೇಲೆ ಬಂದಿರುತ್ತದೆ. ಆಗ ರಸಂ ರೆಡಿ ಎಂದರ್ಥ.. ಇದನ್ನ ಅನ್ನದ ಜೊತೆಗೆ ಅಷ್ಟೇ ಅಲ್ಲದೇ ಹಾಗೆಯೇ ಸೂಪ್ ರೀತಿಯೂ ಅಥವ ನೆಗಡಿ , ಜ್ವರವಿದ್ದಾಗಲೂ ಹಾಗೆಯೇ ಕುಡಿಯಬಹುದು. ರುಚಿ ಜೊತೆಗೆ ಆರೋಗ್ಯಕರವೂ ಹೌದು.