ಯಾವುದೇ APL ಅಥವಾ BPL ರೇಷನ್ ಕಾರ್ಡುಗಳನ್ನು ರದ್ದುಗೊಳಿಸಲು ಸೂಚನೆ ನೀಡಲಾಗಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ. 2023ರ ಸೆಪ್ಟೆಂಬರ್ 2ರಂದು 25,13,798 ಎಪಿಎಲ್ ಕಾರ್ಡುಗಳು ಇದ್ದವು, ಮತ್ತು ನವೆಂಬರ್ 16ರಂದು ಅದು 25,62,566ಕ್ಕೆ ಏರಿದೆ. ರೇಷನ್ ರದ್ದತಿಗೆ ಯಾವುದೇ ನಿರ್ದೆಶನ ನೀಡಿಲ್ಲವೆಂದು ಆಹಾರ ಇಲಾಖೆ ವಿವರಣೆ ನೀಡಿದ್ದು, ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಹರಿದಾಡುತ್ತಿರುವ ವರದಿಯು ಸತ್ಯ ಸಂಗತಿಯಲ್ಲ ಎಂದು ತಿಳಿಸಿದೆ.
ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೀವಾವಧಿ ಶಿಕ್ಷೆ
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಅಪರ ಜಿಲ್ಲಾ ಸತ್ರ ನ್ಯಾಯಾಲಯದ FTSC-1 (ಫಾಸ್ಟ್ ಟ್ರಾಕ್ ವಿಶೇಷ ಕೋರ್ಟ್) ಅಪರಾಧಿ ರಾಜು...