Barry | ಒಬ್ಬನ ಜೊತೆ ಲವ್ ನಲ್ಲಿದ್ದೂ ಇನ್ನೊಬ್ಬನ ಜೊತೆ ಸಂಬಂಧ : ಗೆಳತಿಯನ್ನ ಕೊಂದ ಫುಟ್ ಬಾಲರ್
ಲೈಬೀರಿಯಾದ ಫುಟ್ಬಾಲ್ ಆಟಗಾರ ಮೊಹಮದ್ ಅಗೊಗೊ ಬ್ಯಾರಿ ತನ್ನ ಗೆಳತಿಯನ್ನು ಬರ್ಬರವಾಗಿ ಕೊಂದಿದ್ದಾನೆ.
ಸೋಮವಾರ (ಜೂನ್ 6) ಲೈಬೀರಿಯಾದ ಮೊಂಟ್ಸೆರಾಟೊ ಕೌಂಟಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಬ್ಯಾರಿ ತನ್ನ ಗೆಳತಿಯ ಹತ್ಯೆಯ ಹಿಂದಿನ ಉದ್ದೇಶವನ್ನು ಪತ್ರದ ಮೂಲಕ ಬಹಿರಂಗಪಡಿಸಿದ್ದಾನೆ.
ತಾನು ಅತೀವವಾಗಿ ಪ್ರೀತಿಸುತ್ತಿದ್ದ ಲೈಮಾಸ್ (ಬ್ಯಾರಿಯ ಗೆಳತಿ) ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಕೊಲೆ ಮಾಡಿದ್ದಾಗಿ ಪತ್ರದಲ್ಲಿ ತಿಳಿಸಲಾಗಿದೆ.

ಲೈಮಾಸ್ ಬಗ್ಗೆ ನನ್ನ ಕುಟುಂಬ ಮತ್ತು ಸ್ನೇಹಿತರು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ನಾನು ಕೇಳಲಿಲ್ಲ. ನಾನು ಲೈಮಾಸ್ ಅನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ.
ಆದ್ರೆ ಅವಳು ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ನನ್ನನ್ನು ವಂಚಿಸಿದ್ದಾಳೆ. ಇದು ನನ್ನ ವೃತ್ತಿ ಮತ್ತು ನನ್ನ ಜೀವನವನ್ನು ಹಾಳುಮಾಡಿದೆ.
ಅದಕ್ಕಾಗಿಯೇ ನಾನು ಅವಳನ್ನು ಕೊಂದು ನನ್ನ ಪ್ರೀತಿಯನ್ನು ಸಮಾಧಿ ಮಾಡಿದ್ದೇನೆ. ನಿಮ್ಮ ಮಾತನ್ನು ಕೇಳದಿದ್ದಕ್ಕಾಗಿ ಅವಳನ್ನ ಪ್ರೀತಿಸಿ ತಪ್ಪು ಮಾಡಿದ್ದಕ್ಕಾಗಿ ಕ್ಷಮಿಸಿ.
ನನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಬಾರಿ ಪತ್ರದಲ್ಲಿ ಬರೆದಿದ್ದಾರೆ.