‘ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕ್ಷ್ಯಚಿತ್ರ’ಕ್ಕಾಗಿ ಡಾ. ದೇಬ್ಜಾನಿ ಹಾಲ್ಡರ್ ಅವರಿಗೆ 69ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ.
For ‘Best Science and Technology Documentary’ Dr. 69th Indian National Film Award for Debjani Halder..
ಬೆಂಗಳೂರು, ಆಗಸ್ಟ್ 28, 2023: ಆರ್‌ವಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ದೇಬ್ಜಾನಿ ಹಾಲ್ಡರ್ ಅವರು 69ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ‘ಎಥೋಸ್ ಆಫ್ ಡಾರ್ಕ್‌ನೆಸ್’ ಸಾಕ್ಷ್ಯಚಿತ್ರಕ್ಕಾಗಿ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
ಸಾಕ್ಷ್ಯಚಿತ್ರವು ಸಿನಿಮಾದ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಮತ್ತು ಅದನ್ನು ಬೆಳೆಯಲು ಕಾರಣವಾದವರ ಕುರಿತಾಗಿನ ಉದ್ಯಮದ ಕುರುಡುತನವನ್ನು ವಿವರಿಸುತ್ತದೆ. ದೃಶ್ಯಗಳು ಮತ್ತು ಪ್ರತಿಭೆಗಳಿಗೆ ಸಮಾಜದ ಹೊಗಳಿಕೆಯ ನಡುವೆ, ಇದರ ನಿಜವಾದ ನಾಯಕರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಈ ಚಿತ್ರವು ಈ ನಿರ್ಲಕ್ಷಿತ ಸಿನಿಮಾ ತಂತ್ರಜ್ಞಾನ ಜಗತ್ತಿನ ನಿಜವಾದ ನಾಯಕರನ್ನು ಪರಿಚಯಿಸಿಕೊಡುವ ಯತ್ನ ಮಾಡುತ್ತದೆ.
ಆರ್‌ವಿ ವಿಶ್ವವಿದ್ಯಾನಿಲಯದ ಚಲನಚಿತ್ರ ನಿರ್ಮಾಣ ಕಾರ್ಯಕ್ರಮದ ಮುಖ್ಯಸ್ಥೆ ಮತ್ತು ಚಲನಚಿತ್ರದ ಸಹ-ನಿರ್ದೇಶಕಿ ಡಾ. ದೇಬ್ಜಾನಿ ಹಾಲ್ಡರ್ ಪ್ರತಿಕ್ರಿಯಿಸಿ, ‘69 ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಅರ್ಹವಾದ ಮನ್ನಣೆಗಾಗಿ ನಾವು ನಿಜವಾಗಿಯೂ ಗೌರವ ಮತ್ತು ಕೃತಜ್ಞರಾಗಿರುತ್ತೇವೆ. ‘ಎಥೋಸ್ ಆಫ್ ಡಾರ್ಕ್ನೆಸ್’ ಸಾಕ್ಷ್ಯಚಿತ್ರವು ಸಿನಿಮಾದಲ್ಲಿ ಆಗಾಗ್ಗೆ ಕಡೆಗಣಿಸಲ್ಪಟ್ಟ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ. ಪರದೆಯ ಹಿಂದೆ ಕೆಲಸ ಮಾಡುವವರು ಅಪರಿಚಿತರಾಗಿರುತ್ತಾರೆ. ನನ್ನ ಸಹ ನಿರ್ದೇಶಕ ಅವಿಜಿತ್ ಬ್ಯಾನರ್ಜಿ ಸೇರಿದಂತೆ ನನ್ನ ತಂಡದ ಎಲ್ಲಾ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ‘ ಎಂದರು.
ಆರ್‌ವಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. (ಡಾ.) ವೈ.ಎಸ್.ಆರ್. ಮೂರ್ತಿ, ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್ ಕುಲಪತಿ ಡಾ.ಪಿಯುಷ್ ರಾಯ್ ಮಾತನಾಡಿ, ಡಾ. ದೇಬ್ಜಾನಿ ಹಾಲ್ಡರ್ ಅವರಿಗೆ ಅಭಿನಂದನೆ ಸಲ್ಲಿಸಿದರು.