ಕೊರೊನಾ ವೈರಸ್ ನಿಂದ ದೇಶವನ್ನು 21 ದಿನಗಳ ಲಾಕ್ ಡೌನ್ ಮಾಡಲಾಗಿತ್ತು. ಇದಾದ ಬಳಿಕ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಲಾಗಿದೆ. ಆದರೆ ಜನರಿಗೆ ಮಾತ್ರ ಇದರ ಗಂಭೀರತೆ ಅರ್ಥವಾಗುತ್ತಿಲ್ಲ. ಹಾಗಾಗಿ ಕಾರಣವಿಲ್ಲದೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೀಗೆ ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡೋರಿಗೆ ಪೊಲೀಸರು ವಿಭಿನ್ನ ರೀತಿಯ ಶಿಕ್ಷೆ ನೀಡಿದ್ದರು. ಕೆಲವು ಕಡೆ ಬಸ್ಕಿ ಹೊಡೆಸಿದ್ರೆ, ಇನ್ನೂ ಕೆಲವೆಡೆ ರಸ್ತೆಯಲ್ಲಿ ಕಸ ಗುಡಿಸುವಂತೆ ಹೇಳಿದ್ದಾರೆ, ವಾಹನ ಸವಾರರಿಗೆ ಮಂಗಳಾರತಿ ಮಾಡಿ, ತಿಲಕ ಇಟ್ಟಿದ್ದೂ ಆಯ್ತು. ಈಗ ಉತ್ತರಾಖಂಡ್ನ ರಿಷಿಕೇಶ್ನಲ್ಲಿ ವಿದೇಶಿ ಪ್ರವಾಸಿಗರು ಕೊರೊನಾ ಲಾಕ್ಡೌನ್ ನಿಯಮವನ್ನ ಉಲ್ಲಂಘಿಸಿ ಶಿಕ್ಷೆ ಒಳಗಾಗಿದ್ದಾರೆ. ದೇಶಕ್ಕೆ ವಿವಿಧ ದೇಶಗಳಿಂದ ಬಂದ 10 ಜನ ವಿದೇಶಿಗರು ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಾರೆ. ನಿಯಮ ಮೀರಿ ತಪೋವನದ ಬಳಿ ತಿರುಗಾಡ್ತಿದ್ರು. ಈ ವಿಚಾರ ಅಲ್ಲಿಯ ಪೊಲೀಸರ ಗಮನಕ್ಕೆ ಬಂದಿದೆ. ಬಳಿಕ ವಿದೇಶಿಗರಿಗೆ ಶಿಕ್ಷೆ ನೀಡಿದ್ದಾರೆ. ‘ನಾನು ಲಾಕ್ಡೌನ್ ನಿಯಮ ಪಾಲಿಸಿಲ್ಲ, i am sorry’ ಅಂತ ಪ್ರತಿಯೊಬ್ಬರಿಗೂ 500 ಬಾರಿ ಬರೆಯುವ ಶಿಕ್ಷೆ ನೀಡಲಾಗಿದೆ. ವಿದೇಶಿಗರು ಬರೆದಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಅಂಬೇಡ್ಕರ್ ಬಗ್ಗೆ ನೀಚ ಮಾತು ಸಂವಿಧಾನ ಬರೆಯುವಾಗ ಮದ್ಯ ಸೇವಿಸಿದ್ದಿರಾ ಎಂದು ಪ್ರಶ್ನಿಸಿದ ವ್ಯಕ್ತಿಯ ವಿರುದ್ಧ ಜನಾಕ್ರೋಶ
ಮಂಡ್ಯ: ಭಾರತ ಸಂವಿಧಾನದ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳಾಗಿ ಮಾತನಾಡಿರುವ ವಿಡಿಯೋವೊಂದು ಈಗ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ....








