ಶಿವಮೊಗ್ಗ: ರಾಜ್ಯದಲ್ಲಿ ಹುಲಿ ಉಗುರಿನ ಸುದ್ದಿ ಜೋರಾಗುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ವನ್ಯಜೀವಿ ಉಪ ಸಂರಕ್ಷಣಾ ಅಧಿಕಾರಿಗಳ ತಂಡ ಮತ್ತು ಅರಣ್ಯ ಜಾಗೃತ ದಳ ಅಧಿಕಾರಿಗಳು ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಹತ್ತಿರದ ಬಸವನಗದ್ದೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಕಾಡು ಪ್ರಾಣಿಗಳ ಕೊಂಬು ವಶಕ್ಕೆ ಪಡೆದಿದ್ದಾರೆ.
ಪ್ರಸನ್ನ ಎಂಬ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಜಿಂಕೆ ಹಾಗೂ ಕಾಡುಕೋಣದ ಕೊಂಬನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ವನ್ಯಜೀವಿಯ ಟ್ರೋಫಿಯೊಂದು ಇದ್ದು, ಸೀಜ್ ಮಾಡಲಾಗಿದೆ. ಈ ಮನೆಯ ಮಾಲೀಕರು ವಯಸ್ಸಾಗಿ ಅನಾರೋಗ್ಯದಲ್ಲಿದ್ದರೂ ಅಧಿಕಾರಿಗಳು ಬಂಧನಕ್ಕೆ ಮುಂದಾಗಿದ್ದರು. ಅರಣ್ಯ ಅಧಿಕಾರಿಗಳ ಧೋರಣೆಗೆ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.








