ತೆಲಂಗಾಣ : ಕಾರ್ ನಲ್ಲಿ ಲಾಕ್ ಮಾಡಿ ಬಿಜೆಪಿ ನಾಯಕನ ಸಜೀವ ದಹನ
ಹೈದ್ರಾಬಾದ್ : ತೆಲಂಗಾಣದ ಮೆಡಾಕ್ ಜಿಲ್ಲೆಯಲ್ಲಿ ಮಾಜಿ ಬಿಜೆಪಿ ನಾಯಕನನ್ನ ಕಾರಿನೊಳಗೆ ಲಾಕ್ ಮಾಡಿ ಬೆಂಕಿ ಹಚ್ಚಲಾಗಿದೆ.. ಘಟನೆಯಲ್ಲಿ 45 ವರ್ಷದ ಮಾಜಿ ಸ್ಥಳೀಯ ಬಿಜೆಪಿ ನಾಯಕ ಶ್ರೀನಿವಾಸ ಪ್ರಸಾದ್ ಅವರು ಸಜೀವ ದಹನವಾಗಿದ್ದು, ಭೀಕರ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ..
ಹೋಂಡಾ ಸಿಟಿ ಕಾರ್ ಟ್ರಂಕ್ನಲ್ಲಿ ಬಿಜೆಪಿ ನಾಯಕನನ್ನು ಲಾಕ್ ಮಾಡಿದ್ದ ಕೆಲ ಪರಿಚಿತ ಕಿಡಿಗೇಡಿಗಳು ಅವರನ್ನ ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಈ ಘಟನೆಯ ಕುರಿತು ಮಾತನಾಡಿದ ಮೇಡಕ್ ಎಸ್ಪಿ ದೀಪ್ತಿ, “ಬಿಜೆಪಿ ನಾಯಕನನ್ನು ಕಾರಿನಲ್ಲಿ ಲಾಕ್ ಮಾಡಿ ಅವರನ್ನ ಜೀವಂತವಾಗಿ ಸುಟ್ಟುಹಾಕಲಾಗಿದೆ. ಹೋಂಡಾ ಸಿಟಿ ಕಾರಿನಿಂದ ಅವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದೇವೆ.. ತನಿಖೆ ಜಾರಿಯಲ್ಲಿದೆ” ಎಂದು ತಿಳಿಸಿದ್ದಾರೆ.
ಭಾರತಕ್ಕೆ ನಾಸಾ ಎಚ್ಚರಿಕೆ : ಮುಳುಗಡೆಯಾಗಲಿದೆ ಮಂಗಳೂರು, ಮುಂಬೈ, ಚೆನ್ನೈ
ಮಾಜಿ ಬಿಜೆಪಿ ಸ್ಥಳೀಯ ನಾಯಕ ಶ್ರೀನಿವಾಸ್ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಟಿದ್ದರು, ತಮ್ಮ ಸ್ನೇಹಿತರೊಂದಿಗೆ ತಿರುಪತಿಗೆ ತೆರಳುವ ಯೋಜನೆಯನ್ನು ಅವರ ಕುಟುಂಬಕ್ಕೆ ತಿಳಿಸಿದ್ದರು.. ನಂತರ ಸೋಮವಾರ ರಾತ್ರಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವರನ್ನ ಪತ್ತೆ ಹಚ್ಚಲಾಗಿರಲಿಲ್ಲ. ಬಳಿಕ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.. ಇದಾದ ನಂತರ ಕಾರ್ ಪತ್ತೆಯಾದ ಬೆನ್ನಲ್ಲೇ ಅನುಮಾನ ಬಂದು ಪೊಲೀಸರು ಮೃತದೇಹ ಗುರುತಿಸಲು ಮೃತ ಬಿಜೆಪಿ ನಾಯಕರ ಕುಟುಂಬಸ್ಥರನ್ನ ಕರೆಸಿದ ನಂತರ ಮೃತಪಟ್ಟ ವ್ಯಕ್ತಿಯ ಗುರುತು ಲಭ್ಯವಾಗಿದೆ.. ಶ್ರೀನಿವಾಸ್ ಅವರು RSS ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
ಅಲ್ಲದೇ ಅವರು ಕೊಲೆ ಪ್ರಕರಣದ ಆರೋಪಿಯಾಗಿದ್ದರು ಮತ್ತು ಕೆಲವು ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು. ಶ್ರೀನಿವಾಸ್ ಅವರು ಮೇಡಕ್ನ ಸಿನೆಮ್ಯಾಕ್ಸ್ ಥಿಯೇಟರ್ನ ಮಾಲೀಕರು ಸಹ ಆಗಿದ್ದರು ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಮಂಗಳಪರ್ತಿಯ ಹೊರವಲಯದಲ್ಲಿ ಕಾರು ಹೊತ್ತಿ ಉರಿಯುತ್ತಿದ್ದದ್ದನ್ನ ಗಮನಿಸಿದ ಸ್ಥಳೀಯರು ನಂತರಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.. ಮೂಲಗಳ ಪ್ರಕಾರ ಶ್ರೀನಿವಾಸ್ ತನ್ನ ವ್ಯಾಪಾರ ಪಾಲುದಾರರೊಂದಿಗೆ ಸ್ವಲ್ಪ ಸಮಯದಿಂದ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ.. ಪ್ರಸ್ತುತ ತನಿಖೆ ಜಾರಿಯಲ್ಲಿದೆ.