ಭಾರತಕ್ಕೆ ನಾಸಾ ಎಚ್ಚರಿಕೆ : ಮುಳುಗಡೆಯಾಗಲಿದೆ ಮಂಗಳೂರು, ಮುಂಬೈ, ಚೆನ್ನೈ
ನವದೆಹಲಿ : ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಶತಮಾನದ ಅಂತ್ಯಕ್ಕೆ ಮಂಗಳೂರು ಸೇರಿದಂತೆ ಭಾರತದ ಕರಾವಳಿ ತೀರಗಳಲ್ಲಿರುವ 12 ನಗರಗಳು ಮುಳುಗಲಿವೆ ಎಂಬ ಎಚ್ಚರಿಕೆ ನೀಡಿದೆ
ಸೋಮವಾರ ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ, ವರದಿಯನ್ನು ಬಿಡುಗಡೆ ಮಾಡಿದೆ. ಇದನ್ನು ಅವಲೋಕನ ಮಾಡಿರುವ ನಾಸಾ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ.
ನಾಸಾ ಐಪಿಸಿಸಿ ವರದಿ ಹಾಗೂ ತನ್ನ ಉಪಗ್ರಹಗಳು ನೀಡಿರುವ ಮಾಹಿತಿ ಗಳನ್ನು ತಾಳೆ ಹಾಕಿದ್ದು, 1988ರಿಂದ ಇಚೆಗೆ ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಹಿಮಚ್ಛಾದಿತ ಪ್ರದೇಶಗಳಲ್ಲಿ ಹಿಮಕರಗಿ ಸಮುದ್ರ ಸೇರುತ್ತಿದೆ. ಇದರಿಂದ ಪ್ರತೀ 100 ವರ್ಷಗಳಿಗೊಮ್ಮೆ ಹೆಚ್ಚಾಗುತ್ತಿದ್ದ ಸಮುದ್ರದಲ್ಲಿ ನೀರಿನ ಮಟ್ಟ ಇದೀಗ ಹತ್ತಾರು ವರ್ಷಗಳಿಗೊಮ್ಮೆ ಏರಿಕೆಯಾಗುತ್ತಿದೆ ಎಂದು ನಾಸಾ ವಿವರಿಸಿದೆ.
ಇನ್ನು ಯಾವೆಲ್ಲ ನಗರಗಳಿಗೆ ಅಪಾಯ?
ಮಂಗಳೂರೂ, ಮುಂಬೈ, ಮರ್ಮಗೋವಾ ಕೊಚ್ಚಿ, ಪಾರಾದೀಪ್, ಖಿದೀರ್‍ಪುರ್, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಭಾರತದಲ್ಲಿ ಅಪಾಯದಲ್ಲಿವೆ ಎಂದು ನಾಸಾ ತಿಳಿಸಿದೆ.









