ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಆರೋಗ್ಯ ಗಂಭೀರವಾಗಿದೆ.
ಹೀಗಾಗಿ ಅವರನ್ನು ಠಾಣೆಯ ಆಕೃತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿರುವ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಎಂತಲೂ ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಮುಂಬೈನ ಶಿವಾಜಿ ಪಾರ್ಕ್ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಅನಾವರಣಗೊಳಿಸಲಾಗಿತ್ತು. ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಸೇರಿದಂತೆ ರಮಾಕಾಂತ್ ಅವರ ಕೋಚಿಂಗ್ ನಲ್ಲಿ ಬೆಳೆದಿದ್ದ ಪ್ರಸಿದ್ಧ ಕ್ರಿಕೆಟಿಗರು ಹಾಜರಿದ್ದರು. ಆಗ ಕಾಂಬ್ಳಿ ಅನಾರೋಗ್ಯ ಬಹಿರಂಗವಾಗಿತ್ತು.
ಈಗ ಅಭಿಮಾನಿಯೊಬ್ಬರು ವಿನೋದ್ ಕಾಂಬ್ಳಿ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಕಾಣಬಹುದಾಗಿದೆ.
1991 ರಲ್ಲಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 1993ರಲ್ಲಿ ಭಾರತೀಯ ತಂಡದ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿರುವ ಅವರು ಟೆಸ್ಟ್‌ನಲ್ಲಿ ಒಟ್ಟು 1084 ರನ್ ಮತ್ತು ಏಕದಿನದಲ್ಲಿ 2477 ರನ್ ಗಳಿಸಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ಕಾಂಬ್ಳಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಆದರೆ, ಕುಡಿತದ ಚಟಕ್ಕೆ ಬಿದ್ದು ತಮ್ಮ ವೃತ್ತಿ ಜೀವನ ಹಾಳು ಮಾಡಿಕೊಂಡರು.