ADVERTISEMENT
Thursday, May 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

1996ರಲ್ಲಿ ಮಾಜಿ ಕೋಚ್ ಮದನ್ ಲಾಲ್ ಸೌರವ್ ಗಂಗೂಲಿಗೆ ನೀಡಿದ್ದ ಸಲಹೆ ಏನು..?

admin by admin
June 19, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

1996ರಲ್ಲಿ ಮಾಜಿ ಕೋಚ್ ಮದನ್ ಲಾಲ್ ಸೌರವ್ ಗಂಗೂಲಿಗೆ ನೀಡಿದ್ದ ಸಲಹೆ ಏನು..?

ಸೌರವ್ ಗಂಗೂಲಿ… ಟೀಮ್ ಇಂಡಿಯಾದ ಮಾಜಿ ನಾಯಕ. ಸದ್ಯ ಬಿಸಿಸಿಐ ಅಧ್ಯಕ್ಷ. ಅದಕ್ಕಿಂತಲೂ ಹೆಚ್ಚಾಗಿ ಸೌರವ್ ಗಂಗೂಲಿ ಅಂದ್ರೆ ವಿಶ್ವ ಕ್ರಿಕೆಟ್‍ನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಆದ್ರೆ ಸೌರವ್ ತನ್ನ ಆಟಕ್ಕಿಂತಲೂ ಹೆಚ್ಚಾಗಿ ಗುರುತಿಸಿಕೊಂಡಿದ್ದು ಒಬ್ಬ ನಾಯಕನಾಗಿ. ಹೌದು, ಇವತ್ತೇನಾದ್ರೂ ಟೀಮ್ ಇಂಡಿಯಾ ವಿಶ್ವಕ್ರಿಕೆಟ್ ನಲ್ಲಿ ಈ ಮಟ್ಟದ ಪ್ರದರ್ಶನ ನೀಡಲು ಪ್ರಮುಖ ಕಾರಣೀಕರ್ತರು ಗಂಗೂಲಿ. ಯುವ ಆಟಗಾರರನ್ನು ಗುರುತಿಸಿ, ತಂಡದಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಬೆಳಸಿದ್ದ ಅದ್ಭುತ ಕ್ಯಾಪ್ಟನ್ ದಾದಾ ಎಂಬುದರಲ್ಲಿ ಎರಡು ಮಾತಿಲ್ಲ.
1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶತಕ ದಾಖಲಿಸುವ ಮೂಲಕ ಎಂಟ್ರಿಕೊಟ್ಟವರು ಕೊಲ್ಕತ್ತಾದ ಮಹಾರಾಜ ಗಂಗೂಲಿ. ಅಲ್ಲಿಂದ 2008-2009ರ ತನಕ ಗಂಗೂಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಕೇವಲ ನಾಲ್ಕು ವರ್ಷಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಅವಕಾಶ ಸಿಕ್ಕಾಗ ಹಿಂದೆ ಮುಂದೆ ಯೋಚನೆ ಮಾಡಿರಲಿಲ್ಲ. ಸಂಕಷ್ಟದ ಸಮಯದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಸಾರಥ್ಯ ವಹಿಸಿಕೊಂಡ್ರು. ವಿದೇಶಿ ನೆಲದಲ್ಲಿ ಮರೀಚಿಕೆಯಾಗುತ್ತಿದ್ದ ಗೆಲುವನ್ನು ದಕ್ಕಿಸಿಕೊಂಡು ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2003ರ ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದ್ರೂ ಕಪ್ ಗೆಲ್ಲಲು ಆಗಲಿಲ್ಲ. ಇದೊಂದು ಕೊರಗು ಗಂಗೂಲಿಯನ್ನು ಕಾಡುತ್ತಿದೆ. ಆದ್ರೆ ತಾನೇ ಬೆಳೆಸಿದ್ದ ಹುಡುಗರು 2011ರಲ್ಲಿ ಕಪ್ ಗೆದ್ದಾಗ ಸಂಭ್ರಮಪಟ್ಟುಕೊಂಡಿದ್ದರು. ಇದನ್ನು ಈ ಹಿಂದೆಯೇ ಸೌರವ್ ಗಂಗೂಲಿ ಹೇಳಿಕೊಂಡಿದ್ದರು.
ಇನ್ನು ಸೌರವ್ ಗಂಗೂಲಿ ಒಬ್ಬ ಆಟಗಾರನಾಗಿ ಯಶ ಸಾಧಿಸಿದ್ದು ಆರಂಭಿಕನಾಗಿ. ಸಚಿನ್ ತೆಂಡುಲ್ಕರ್ ಜೊತೆ ಇನಿಂಗ್ಸ್ ಆರಂಭಿಸಿ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದ್ದರು. ಯಶಸ್ವಿ ಆರಂಭಿಕ ಜೋಡಿ ಎಂಬಂತೆ ಬಿಂಬಿಸಲಾಗುತ್ತಿದ್ದ ಸೌರವ್ ಮತ್ತು ಸಚಿನ್ ಜೋಡಿ ಎದುರಾಳಿ ತಂಡದ ಬೌಲರ್‍ಗಳಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಿದ್ದರು.
ಆದ್ರೆ ಸೌರವ್ ಗಂಗೂಲಿ ತನ್ನ ಕ್ರಿಕೆಟ್ ಬದುಕಿನ ಆರಂಭದ ದಿನಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾಗಿದ್ರೆ ಸೌರವ್ ಗಂಗೂಲಿ ಆರಂಭಿಕನಾಗಿ ಬಡ್ತಿ ಪಡೆದುಕೊಂಡಿರುವುದು ಹೇಗೆ ? ಸೌರವ್ ಗಂಗೂಲಿ ಆರಂಭಿಕನಾಗಿ ಆಡುವಂತೆ ಸಲಹೆ ನೀಡಿದ್ದು ಯಾರು ? ಸೌರವ್ ಗಂಗೂಲಿಯಲ್ಲಿ ಆರಂಭಿಕ ಆಟಗಾರನಾಗುವಂತಹ ಗುಣವಿದೆ ಎಂಬುದನ್ನು ತಿಳಿದುಕೊಂಡ ಕೋಚ್ ಯಾರು ? ಈ ಪ್ರಶ್ನೆಗೆ ಉತ್ತರ ಸಿಂಪಲ್. ಅವರೇ ಟೀಮ್ ಇಂಡಿಯಾದ ಕೋಚ್ ಆಗಿದ್ದ ಮದನ್ ಲಾಲ್.
ನಾವು ದಾದಾನಿಗೆ ಆರಂಭಿಕನಾಗಿ ಬಡ್ತಿ ನೀಡಲು ನಿರ್ಧಾರ ಮಾಡಿದ್ದೇವು. ಆದ್ರೆ ಅವರು ಇದನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೋ ಇಲ್ವೋ ಅಂತ ಗೊತ್ತಿಲ್ಲ. ನಾನು ಆಗ ದಾದಾನಿಗೆ ಒಂದು ಮಾತು ಹೇಳಿದ್ದೆ. ದಾದಾ ಐದನೇ ಕ್ರಮಾಂಕದಲ್ಲಿ ಏನು ಮಾಡಲು ಸಾಧ್ಯವಿಲ್ಲ. ನೀವು ಇನಿಂಗ್ಸ್ ಆರಂಭಿಸಿ ಎಂದು ಸಲಹೆ ನೀಡಿದ್ದೆ ಎಂಬುದನ್ನು ಮದನ್ ಲಾಲ್ ನೆನಪಿಸಿಕೊಳ್ಳುತ್ತಿದ್ದಾರೆ.
1996ರ ನಂತರ ಸೌರವ್ ಗಂಗೂಲಿ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿದ್ದರು. ಕೆಲವೊಂದು ಪಂದ್ಯಗಳಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾಗೇ ಶ್ರೀಲಂಕಾದಲ್ಲಿ ನಡೆದಿದ್ದ ಸಿಂಗರ್ ವಲ್ರ್ಡ್ ಸಿರೀಸ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ಐದನೇ ಕ್ರಮಾಂಕದಲ್ಲಿ ಆಡಿದ್ದರು. ಆದ್ರೆ ಐದನೇ ಕ್ರಮಾಂಕದಲ್ಲಿ ಗಂಗೂಲಿ ಅಷ್ಟೇನೂ ಯಶ ಸಾಧಿಸಲಿಲ್ಲ ಎಂದು ಹೇಳ್ತಾರೆ ಮದನ್ ಲಾಲ್.
1996, ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೈಪುರದಲ್ಲಿ ಗಂಗೂಲಿ ಸಚಿನ್ ಜೊತೆ ಇನಿಂಗ್ಸ್ ಆರಂಭಿಸಿದ್ದರು. ಆಗ ಮದನ್ ಲಾಲ್ ತಂಡದ ಕೋಚ್ ಆಗಿದ್ದರು. ಪಂದ್ಯಕ್ಕೆ ಮುನ್ನವೇ ಮದನ್ ಲಾಲ್ ಗಂಗೂಲಿಗೆ ಸಲಹೆ ನೀಡಿದ್ದರು. ಆ ಪಂದ್ಯದಲ್ಲಿ ಗಂಗೂಲಿ ಅರ್ಧಶತಕ ಕೂಡ ದಾಖಲಿಸಿದ್ದರು. ನಂತರ ಸಚಿನ್ ಜೊತೆ ಖಾಯಂ ಆಗಿ ಗಂಗೂಲಿ ಆರಂಭಿಕ ಆಟಗಾರನಾಗಿದ್ದರು.
ಪ್ರತಿ ಆಟಗಾರನಿಗೂ ಅವರದ್ದೇ ಒಂದು ವಿಶೇಷತೆ ಇರುತ್ತೆ. ಗಂಗೂಲಿ ಕೂಡ ಹಾಗೇ. ಇನ್ನು ಕ್ರೀಸ್‍ನಲ್ಲಿ ನಿಲ್ಲಲು ಪ್ರತಿ ಆಟಗಾರನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾನೆ. ಕೆಲವು ಓವರ್‍ಗಳಲ್ಲಿ ಎರಡು ಮೂರು ರನ್ ಗಳಿಸಿದ್ರೂ ಪರವಾಗಿಲ್ಲ. ಪರಿಸ್ಥಿತಿಯನ್ನು ಅರಿತುಕೊಂಡು ಆಡಬೇಕಾಗುತ್ತದೆ. ಇತ್ತಿಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ, ಅಜ್ಯಂಕ್ಯಾ ರಹಾನೆ ಆ ರೀತಿಯ ಆಟವನ್ನು ಆಡ್ತಾರೆ ಎಂದು ಮದನ್ ಲಾಲ್ ಹೇಳಿದ್ರು.
ಗಂಗೂಲಿಗೆ ನಾನು ಸಲಹೆ ನೀಡಿದಾಗ ಓಕೆ ಅಂದಿದ್ದರು. ಆ ನಂತರ ಗಂಗೂಲಿ ಹಿಂತಿರುಗಿ ನೋಡಲೇ ಇಲ್ಲ. ಸಚಿನ್ ಮತ್ತು ಗಂಗೂಲಿ ಜೋಡಿ ಆಗ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅಲ್ಲದೆ ಇವರಿಬ್ಬರ ಜೊತೆಯಾಟದಲ್ಲಿ ಟೀಮ್ ಇಂಡಿಯಾ ಹಲವಾರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಅಂದ ಹಾಗೇ ಗಂಗೂಲಿಗೆ ನಾನು ಈ ಸಲಹೆ ನೀಡಿದ್ದು 1996ರ ಶ್ರೀಲಂಕಾ ಸರಣಿಯ ವೇಳೆ ಎಂದು ಮದನ್ ಲಾಲ್ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡ್ರು.

Related posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

May 20, 2026
ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

May 20, 2026
Tags: ICCIndian cricketIPLmadan lalSachin TendulkarSourav Gangulyteam india
ShareTweetSendShare
Join us on:

Related Posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

by Shwetha
May 20, 2026
0

ಡಿಕೆ ಶಿವಕುಮಾರ್ ಅವರು ತುಮಕೂರನ್ನು 2ನೇ ಬೆಂಗಳೂರು ಆಗಿ ಅಭಿವೃದ್ಧಿಪಡಿಸುವ ಆಲೋಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ತುಮಕೂರಿನಲ್ಲಿ ಆಯೋಜಿಸಿದ್ದ...

ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

by Shwetha
May 20, 2026
0

ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ನೇರ ಕಾರಣ ಎಂದು...

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

by Shwetha
May 20, 2026
0

ರಾಜ್ಯದ ಜನಸಾಮಾನ್ಯರಿಗೆ ಮತ್ತು ಬಡ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಕೇವಲ ಅಕ್ಕಿ, ಬೇಳೆ...

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

by Shwetha
May 20, 2026
0

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಲಯದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವ ವಿಖ್ಯಾತ ಬಾದಾಮಿ ಗುಹೆಗಳಲ್ಲಿ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ...

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

by Shwetha
May 20, 2026
0

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಭೇಟಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram