ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಲೀಂ ದುರಾನಿ ಇಹಲೋಕ ತ್ಯಜಿಸಿದ್ದಾರೆ.
1960ರ ದಶಕದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗರಾಗಿದ್ದ ಸಲೀಂ ದುರಾನಿ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಆಲ್ರೌಂಡರ್ ಕ್ರಿಕೆಟಿಗರಾಗಿದ್ದ ದುರಾನಿ ಅವರು ಬಾಲಿವುಡ್ ನಲ್ಲಿ ಕೂಡ ನಟಿಸಿದ್ದಾರೆ. 1934ರ ಡಿಸೆಂಬರ್ 11ರಂದು ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಜನಿಸಿದ್ದ ಸಲೀಂ ದುರಾನಿ, ಗುಜರಾತ್ನ ಜಮ್ನಾಗರ್ದಲ್ಲಿ ತಮ್ಮ ಸಹೋದರ ಜಹಾಂಗೀರ್ ದುರಾನಿಯೊಂದಿಗೆ ವಾಸಿಸುತ್ತಿದ್ದರು. ಜನವರಿಯಲ್ಲಿ ಕುಸಿದು ಬಿದ್ದು ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಪ್ರಾಕ್ಸಿಮಲ್ ತೊಡೆ ಎಲುಬಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಕಾಬೂಲ್ ಮೂಲದ ದುರಾನಿ ಭಾರತ ತಂಡದಲ್ಲಿ ಬ್ಯಾಟ್ ಮತ್ತು ಬೌಲಿಂಗ್ನಿಂದಲೇ ಖ್ಯಾತಿ ಗಳಿಸಿದ್ದರು. ಎಡಗೈ ಬೌಲರ್ ಆಗಿದ್ದ ಸಲೀಂ, ಟೀಂ ಇಂಡಿಯಾ ಪರವಾಗಿ 29 ಟೆಸ್ಟ್‌ಗಳನ್ನು ಆಡಿದ್ದು, 1961- 62 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೆಸ್ಟ್ ಸರಣಿಯ ಐತಿಹಾಸಿಕ ಗೆಲುವಿನಲ್ಲಿ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಸಲೀಂ ಕ್ರಮವಾಗಿ 8 ಮತ್ತು 10 ವಿಕೆಟ್‌ಗಳನ್ನು ಪಡೆದಿದ್ದರು. ಇದು ಭಾರತ 2-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು ಕಾರಣವಾಗಿತ್ತು.
ಸಲೀಂ ದುರಾನಿ ಅವರು 1960ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು 1960ರಲ್ಲಿ. 1961-62ರಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದಿದ್ದ ಟೆಸ್ಟ್ ಮ್ಯಾಚ್ನಲ್ಲಿ ಹಿರೋ ಆಗಿ ಹೊರಹೊಮ್ಮಿದ್ದರು.








