ಗುಂಡಿನ ದಾಳಿಗೆ ಒಳಗಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ…
ಜಪಾನ ನಾ ಮಾಜಿ ಪ್ರಧಾನಿ ಶಿಂಜೋ ಅಬೆ ಗುಂಡಿನ ದಾಳಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜಪಾನ್ ನ ನಾರಾ ಸಿಟಿಯಲ್ಲಿ ಚುನಾವಣಾ ಭಾಷಣದ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿಗೆ ಒಳಗಾಗಿದ್ದರು.
ಜಪಾನ್ ಕಾಲಮಾನ 11.30ರ ಸುಮಾರಿಗೆ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಶಿಂಜೋ ಅಬೆ ಮೇಲೆ ಗುಂಡು ಹಾರಿಸಲಾಗಿದೆ. ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಜಪಾನ್ ನ ಸಾರ್ವಜನಿಕ ದೂರದರ್ಶನ ವರದಿ ಮಾಡಿದೆ. ದಾಳಿಗೊಳಗಾದ 6 ಗಂಟೆಗಳ ನಂತರ ಸಾವನ್ನಪ್ಪಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿಯನ್ನ ಸ್ಥಳದಲ್ಲೇ ಬಂಧಿಸಲಾಗಿದೆ. ಆತನನ್ನ ಯಮಗಾಮಿ ತೆತ್ಸುಯಾ ಎಂದು ಗುರುತಿಸಲಾಗಿದೆ. 42 ವರ್ಷದ ಯಮಗಾಮಿ ಶಿಂಜೋ ಅಬೆ ಅವರ ನೀತಿಗಳಿಂದ ಅತೃಪ್ತರಾಗಿದ್ದರು ಎಂದು ಹೇಳಲಾಗುತ್ತಿದೆ.
Former Japanese PM Shinzo Abe assassinated
ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಗುಂಡು ಹಾರಿಸಿದ ನಂತರ ಶಿಂಜೋ ಅಬೆ ಹೃದಯಾಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲ.ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಥಳದಲ್ಲಿ ಗುಂಡಿನ ಸದ್ದು ಕೇಳಿಸಿದ್ದು, ಮಾಜಿ ಪ್ರಧಾನಿ ದೇಹದಿಂದ ದೇಹದಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ.
ಎರಡು ಅವಧಿಗಳ ಸುಮಾರು 9 ವರ್ಷಗಳ ಕಾಲ ಶಿಂಜೊ ಜಪಾನ್ನ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 67 ವರ್ಷದ ಶಿಂಜೊ ಅವರು ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP) ಮೂಲಕ ಪ್ರಧಾನಿ ಹುದ್ದೆಗೇರಿದ್ದರು. 2006 ರಿಂದ 07 ಮೊದಲು 1 ವರ್ಷ ಪ್ರಧಾನಿಯಾಗಿದ್ದರು. ಇದಾದ ಬಳಿಕ 2012ರಿಂದ 2020ರವರೆಗೆ 8 ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ಜಪಾನ್ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಕಾಲ (9 ವರ್ಷ) ಪ್ರಧಾನಿ ಹುದ್ದೆಯಲ್ಲಿದ್ದ ದಾಖಲೆ ಅವರ ಹೆಸರಾಗಿದೆ.
ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಭಾರತದೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಶೇಷ ಸ್ನೇಹವನ್ನ ಹೊಂದಿದ್ದರು. ಭಾರತ ಸರ್ಕಾರವು 2021 ರಲ್ಲಿ ಶಿಂಜೋ ಅಬೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪದ್ಮವಿಭೂಷಣ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ..