Shinzo Abe – ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ…
ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಶುಕ್ರವಾರ ಬೆಳಗ್ಗೆ ಜಪಾನಿನ ನಾರಾ ನಗರದಲ್ಲಿ ದಾಳಿ ನಡೆದಿದೆ. ಚುನಾವಣಾ ಪ್ರಚಾರದ ವೇಳೆ ಅಪರಿಚತ ವ್ಯಕ್ತಿ ಎರಡು ಬಾರಿ ಗುಂಡು ಹಾರಿಸಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಭಿನ್ನ ಮಾಹಿತಿಗಳು ಕೇಳಿ ಬರುತ್ತಿವೆ.
ಜಪಾನಿನ ಮಾಧ್ಯಮಗಳ ಪ್ರಕಾರ, ಶಿಂಜೋ ಅಬೆ ಹೃದಯ ಕೆಲಸ ಮಾಡುವುದನ್ನ ನಿಲ್ಲಿಸಿದೆ. ಸಾವಿನ ಸಾಧ್ಯತೆಯನ್ನ ವ್ಯಕ್ತಪಡಿಸಿವೆ.
Former Japanese PM Shinzo Abe shot during election campaign, suffers heart failure
https://twitter.com/i/status/1545278245246947328
ಜಪಾನ್ ಕಾಲಮಾನ 11.30ರ ಸುಮಾರಿಗೆ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಶಿಂಜೋ ಅಬೆ ಮೇಲೆ ಗುಂಡು ಹಾರಿಸಲಾಗಿದೆ. ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಜಪಾನ್ ನ ಸಾರ್ವಜನಿಕ ದೂರದರ್ಶನ ವರದಿ ಮಾಡಿದೆ.
ತೀವ್ರ ರಕ್ತಸ್ರಾವವಾಗಿ ಕುಸಿದ ಸ್ಥಳದಲ್ಲಿಯೇ ಕುಸಿದುಬಿದ್ದ ಶಿಂಜೊ ಅಬೆಯವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸರು ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾರಾ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಶಿಂಜೋ ಅಬೆ ಚಿಕಿತ್ಸೆನೀಡಲಾಗುತ್ತಿದ್ದು, ಸ್ಥಳಕ್ಕೆ ಪ್ರಧಾನಿ ಫ್ಯೂಮಿಯೊ ಕಿಶಿಡಾ ಆಗಮಿಸಿದ್ದಾರೆ.








