ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಲಾಕ್‍ಡೌನ್ ಜಾರಿ ಮಾಡುವ ವಿಚಾರವಾಗಿ ಹಾಲಿ ಶಾಸಕ ರಾಮಪ್ಪ ಹಾಗೂ ಮಾಜಿ ಶಾಸಕ ಬಿ.ಪಿ ಹರೀಶ್ ನಡುವೆ ವಾಕ್ಸಮರ ಮುಂದುವರೆದಿದೆ.
ಮಾಜಿ ಶಾಸಕ ಬಿ.ಪಿ ಹರೀಶ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಶಾಸಕ ರಾಮಪ್ಪ ದೂರು ನೀಡಿದ್ದಾರೆ.
ಮಾಜಿ ಶಾಸಕ ಬಿ.ಪಿ ಹರೀಶ್ ಎಲ್ಲ ವಿಷಯದಲ್ಲೂ ಮೂಗು ತೂರಿಸಲು ಬರುತ್ತಿದ್ದಾರೆ. ಹರೀಶ್ ವಿರುದ್ದ ಸಿಎಂ ಯಡಿಯೂರಪ್ಪ ಅವರಿಗೂ ದೂರು ಸಲ್ಲಿಸುತ್ತೇವೆ. ಎರಡು ಸೋತ್ತಿದ್ದಕ್ಕೆ ಹುಚ್ಚಾಟ ಮೆರೆಯುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಹರಿಹರ ಶಾಸಕ ಎಸ್ ರಾಮಪ್ಪ ಕಿಡಿಕಾರಿದ್ದಾರೆ.
ಹರಿಹರವನ್ನು ಸ್ಮಶಾನ ಮಾಡಲು ನಾವು ಬಿಡುವುದಿಲ್ಲ. ಲಾಕ್‍ಡೌನ್ ಮಾಡೇ ಮಾಡ್ತಿವಿ. ಕೊರೊನಾ ಸಂದರ್ಭದಲ್ಲಿ ಹರೀಶ್ ಚೆಲ್ಲಾಟ ಆಡುತ್ತಿದ್ದಾರೆ. ಲಾಕ್‍ಡೌನ್ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಹರೀಶ್ ಅವರ ವರ್ತನೆ ಹೀಗೇ ಆದರೆ ಅವರಿಗೆ ಮೂರನೇ ಭಾರೀ ಸೋಲು ಕಟ್ಟಿಟ್ಟ ಬುತ್ತಿ. ಲಾಕ್‍ಡೌನ್ ಮಾಡೋಕೆ ಬಿಡಲ್ಲ ಅನ್ನೋಕೆ ಅವರ್ಯಾರು. ಸಮಯ ನಿಗಧಿಗೊಳಿಸಿ ಲಾಕ್‍ಡೌನ್ ಮಾಡೇ ಮಾಡ್ತಿವಿ. ವರ್ಗಾವಣೆ ಮಾಡಿಸುತ್ತೇವೆ ಎಂದು ಅಧಿಕಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡ್ತಾ ಇದಾರೆ ಎಂದು
ಮಾಜಿ ಶಾಸಕ ಹರೀಶ್ ವಿರುದ್ಧ ಶಾಸಕ ಎಸ್.ರಾಮಪ್ಪ ರಿಂದ ಗಂಭೀರ ಆರೋಪ ಮಾಡಿದ್ದಾರೆ.








