ಮಾಜಿ ಶಾಸಕ ಎಂ.ಎಂ ಸಜ್ಜನ್ ನಿಧನ Saaksha Tv
ವಿಜಯಪುರ: ಮುದ್ದೇಬಿಹಾಳ ಕ್ಷೇತ್ರದ ಮಾಜಿ ಶಾಸಕ ಎಂ.ಎಂ ಸಜ್ಜನ್ (95) ಮಂಗಳವಾರ ನಿಧನರಾಗಿದ್ದಾರೆ.
ಮಾಜಿ ಶಾಸಕ ಮಲ್ಲಪ್ಪ ಮುರಿಗೆಪ್ಪ ಸಜ್ಜನ ವಯೋಸಹಜ ಖಾಯಿಲೆಯಿಂದ ಬಳುತ್ತಿದ್ದರು. ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಸಂಜೆ 4 ಗಂಟೆಗೆ ಮುದ್ದೇಬಿಹಾಳ ಪಟ್ಟಣದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸಜ್ಜನವರು 1972-78 ರವರೆಗೆ ಮುದ್ದೇಬಿಹಾಳ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಹಾಗೇ ಇವರು ವ್ಯಾಪರಸ್ತರಾಗಿದ್ದು ಅಪಾರ ಜನಪ್ರೀಯ ಪಡೆದಿದ್ದರು. ಇವರ ನಿಧಕ್ಕೆ ಅಭಿಮಾನಿಗಳು ಕಂಬನಿ ಮಿಡದಿದ್ದಾರೆ.
ಸಜ್ಜನ ವರ ನಿಧನಕ್ಕೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ವಿವಿಧ ಮಠಾಧೀಶರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.








