Prabhakar Rane | ಮಾಜಿ ಸಚಿವ ಪ್ರಭಾಕರ ರಾಣೆ ಇನ್ನಿಲ್ಲ
ಮೊಯ್ಲಿ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದರು
ವಯೋ ಸಹಜ ಕಾಯಿಲೆಯಿಂದ ವಿಧಿವಶ
ಪ್ರಭಾಕರ ರಾಣೆ ನಿಧನಕ್ಕೆ ಗಣ್ಯರ ಕಂಬನಿ
ಕಾರವಾರ : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಪ್ರಭಾಕರ ರಾಣೆ ಅವರು ನಿಧನ ಹೊಂದಿದ್ದಾರೆ. ಅವರಿಗೆ 18 ವರ್ಷ ವಯಸ್ಸಾಗಿತ್ತು. ಮಧ್ಯಾಹ್ನ 1.30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ರಾಣೆ ಅವರು 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು, ಬಳಿಕ ಮೂರು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು.

1993ರಲ್ಲಿ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರತೆ ಶಿಕ್ಷಣ ಖಾತೆ ಪಡೆದು 10 ತಿಂಗಳು ಸಚಿವರಾಗಿದ್ದರು.
ಪ್ರಭಾಕರ ರಾಣೆ ಅವರು ಸಚಿವರಾಗಿದ್ದ ಅವಧಿಯಲ್ಲಿ ಅಂತಾರಾಷ್ಟ್ರೀಯ ಯುವ ಸಮ್ಮೇಳನವನ್ನು ಸಿದ್ಧರ ಗ್ರಾಮದಲ್ಲಿ ನಡೆಸಿದ್ದರು.
ಆ ಮೂಲಕ ದೇಶ ವಿದೇಶಗಳಿಂದ ಯುವ ಜನರು ಕಾರವಾರಕ್ಕೆ ಬರಲು ಕಾರಣರಾಗಿದ್ದರು.
ಪ್ರಭಾಕರ ರಾಣೆ ಅವರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.