Tumakuru: ಮಾಜಿ ಸಚಿವ ಟಿ ಬಿ ಜಯಚಂದ್ರ ಅವರ ಕಾರು ಪಲ್ಟಿ

1 min read
TB Jaychandra Saaksha Tv

ಮಾಜಿ ಸಚಿವ ಟಿ ಬಿ ಜಯಚಂದ್ರ ಅವರ ಕಾರು ಪಲ್ಟಿ

ತುಮಕೂರು: ಮಾಜಿ ಸಚಿವ ಟಿ ಬಿ ಜಯಚಂದ್ರ ಅವರ ಕಾರು ಪಲ್ಟಿಯಾಗಿದ್ದು, ಟಿ ಬಿ ಜಯಚಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಮಕೂರು ತಾಲೂಕಿನ  ಸಿಬಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ರಾತ್ರಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಾಜಿ ಸಚಿವರಿಗೆ ಗಾಯಗಳಾಗಿದ್ದು, ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗಿದೆ.

TB Jaychandra Car Accident Saaksha Tv

ತಡರಾತ್ರಿ 1 ಗಂಟೆ ಸುಮಾರಿಗೆ ಶಿರಾ ಕ್ಷೇತ್ರದ‌ ಕಾಂಗ್ರೆಸ್ ಮಾಜಿ ಶಾಸಕ ಟಿ ಬಿ ಜಯಚಂದ್ರ ಅವರು ರಾತ್ರಿ ಫಾರ್ಚುನರ್ ಕಾರ್ ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚರಿಸುತ್ತಿದ್ದ ಕಾರು ರಾತ್ರಿ 1 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ.

ಪರಿಣಾಮ ಕಾರಿನಲ್ಲಿದ್ದ ಮಾಜಿ ಸಚಿವರಿಗೆ, ಚಾಲಕನಿಗೆ, ಗನ್​​ಮ್ಯಾನ್ ಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ. ಈ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd