ಬಾಗಲಕೋಟೆ: ಮಾಜಿ ಸಚಿವ ಉಮಾಶ್ರೀ ಆರ್.ಆರ್ ನಗರ ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೆ, ಅತ್ತ ಬಾಗಲಕೋಟೆಯಲ್ಲಿರುವ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ವಿದ್ಯಾನಗರದಲ್ಲಿರುವ ಉಮಾಶ್ರೀ ಅವರ ಮನೆಯಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ. ಮನೆಯ ಬಾಗಿಲು ಮುರಿದು ನುಗ್ಗಿರುವ ಕಳ್ಳರು, ಟ್ರೆಸರಿ ಒಡೆದುಹಾಕಿ ಅಪಾರ ಪ್ರಮಾಣದ ಚಿನ್ನಾಭರಣ, ಹಣ ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೇರದಾಳ ಪೊಲೀಸರು, ಸಿಪಿಐ ಕರುಣೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ದರೋಡೆ ವೇಳೆ ಎಷ್ಟು ಹಣ, ಆಭರಣ ಕಳ್ಳತನವಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಉಮಾಶ್ರೀ ಬಂದ ಬಳಿಕವೇ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಕೋಟೆಯತ್ತ ಉಮಾಶ್ರೀ ದೌಡು..
ಮನೆಯಲ್ಲಿ ಕಳ್ಳತನವಾಗಿರುವ ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವೆ ಉಮಾಶ್ರೀ ಬೆಂಗಳೂರಿನಿಂದ ಬಾಗಲಕೋಟೆಯತ್ತ ಹೊರಟಿದ್ದಾರೆ. ಆರ್.ಆರ್ ನಗರ ಚುನಾವಣೆ ಕಾರಣ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಉಮಾಶ್ರೀ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು.
ಮನೆಯಲ್ಲಿ ಪೀಠೋಪಕರಣ, ದಿನಬಳಕೆಯ ವಸ್ತುಗಳು ಬಿಟ್ಟರೆ ಬೆಲೆ ಬಾಳುವ ವಸ್ತುಗಳು ಏನೂ ಇರಲಿಲ್ಲ. ಚಿನ್ನಾಭರಣ ಹಾಗೂ ನಗದು ಇಟ್ಟಿರಲಿಲ್ಲ. ಮನೆಯಲ್ಲಿ ಕಳ್ಳತನವಾಗಿದೆ ಎಂದು ನಮ್ಮ ಹುಡುಗರು ಹೇಳಿದ್ದಾರೆ. ಕಳ್ಳರು ಏನೇನು ಕದ್ದಿದ್ದಾರೆ ಎಂಬುದು ಗೊತ್ತಿಲ್ಲ. ಬೆಂಗಳೂರಿನಿಂದ ಹೊರಟಿದ್ದು ಸಂಜೆ ಬಾಗಲಕೋಟೆ ತಲುಪುತ್ತೇನೆ ಎಂದು ಉಮಾಶ್ರೀ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel