ಮಾಜಿ ಸಚಿವರ ಏಕಾಂಗಿ ಪ್ರತಿಭಟನೆ

1 min read
H D Revanna saaksha tv

ಮಾಜಿ ಸಚಿವರ ಏಕಾಂಗಿ ಪ್ರತಿಭಟನೆ Saaksha Tv

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಏಕಾಂಗಿಯಾಗಿ, ಸಿಎಂ ಗೃಹ ಕಚೇರಿ ಕೃಷ್ಣಾ ಎದುರು M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ರೇವಣ್ಣ ಹೊಸ ಸ್ನಾತ್ತಕೋತ್ತರ ಪದವಿ ನೀಡಲು ರಾಜ್ಯ ಸರ್ಕಾರ ನಿರಾಕರಿಸುತ್ತಿದೆ. ಹೊಸ ಪದವಿಗಳನ್ನು ನೀಡಲು ಸಾಧ್ಯವಿಲ್ಲ ಅಂತ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜೂರು ಮಾಡಿದ್ದರೂ ಸಚಿವರು ತಡೆ ಹಿಡಿದಿದ್ದಾರೆ. ಹೆಚ್​ಡಿಕೆ ನೀಡಿದ್ದನ್ನು ಅಶ್ವತ್ಥ್ ನಾರಾಯಣ ರದ್ದು ಮಾಡಿದ್ದಾರೆ. ನಮಗೆ ಕೊಟ್ಟ ಎಲ್ಲ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಬಡವರ ಮಕ್ಕಳು ಓದುವ ಕಾಲೇಜಿಗೆ ಯಾಕೆ ರಾಜಕೀಯ ಎಂದು ಪ್ರಶ್ನಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಯಾಕೆ ಇದನ್ನ ಸಚಿವರು ತಿರಸ್ಕರಿಸಿದ್ದಾರೆ. ಸರ್ಕಾರದ ನಷ್ಟದಲ್ಲಿದ್ದರೆ ನಾನೇ ಟೀಚರ್​​ಗೆ ಸಂಬಳ ಕೊಡುತ್ತೇನೆ. ಬೇಕಿದ್ದರೆ ಛಾಪಾ ಕಾಗದದ ಮೇಲೆ ಬರೆದುಕೊಡಲು ಸಿದ್ಧ. ಖಾಸಗೀ ಕಾಲೇಜಿಗೆ ಅನುಮತಿ ಕೊಡಲು ಸಚಿವರಿಗೆ ಆಗುತ್ತದೆ. ಕೆಲವರಿಗೆ 300-400 ಕೋಟಿ ರೂ. ನಿಯಮ ಮೀರಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಹಣ ಎಲ್ಲಿ ಕೊಟ್ಟಿದ್ದಾರೆ ಅಂತ ಗೊತ್ತಿದೆ ಅಂತ  ಮಾಜಿ  ಸಚಿವ ರೇವಣ್ಣ ಹೇಳಿಕೆ ನೀಡಿದ್ದಾರೆ.

ಬಳಿಕ ಖರೆ ಮಾಡಿ ಮಾಜಿ ಸಚಿವ ರೇವಣ್ಣ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ‌ ಶುಕ್ರವಾರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd