Mandya | ಶಾಸಕ ಸುರೇಶಗೌಡರ ಸ್ವಗ್ರಾಮವೇ ಅಭಿವೃದ್ಧಿ ಆಗಿಲ್ಲ
ಮಂಡ್ಯ : ಶಾಸಕ ಸುರೇಶಗೌಡರ ಸ್ವಗ್ರಾಮವೇ ಅಭಿವೃದ್ಧಿ ಆಗಿಲ್ಲ. ಅಕ್ಕಪಕ್ಕದ ಗ್ರಾಮಗಳಲ್ಲೂ ಅಭಿವೃದ್ಧಿಯ ಕುರುಹು ಕಾಣುತ್ತಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಲ್.ಆರ್.ಶಿವರಾಮೇಗೌಡ, ನಾಗಮಂಗಲ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಸುರೇಶಗೌಡ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕೊಡುಗೆ ಶೂನ್ಯ.
ಕೆ.ಸುರೇಶಗೌಡ, ಚಲುವರಾಯಸ್ವಾಮಿ ತಮ್ಮ ಸಾಧನೆಗಳ ಬಗ್ಗೆ ಸುಳ್ಳು ಹೇಳಿಕೊಂಡು ಜನರನ್ನು ಮರುಳು ಮಾಡುತ್ತಿದ್ದಾರೆ.
ಶಾಸಕ ಸುರೇಶಗೌಡರ ಸ್ವಗ್ರಾಮವೇ ಅಭಿವೃದ್ಧಿ ಆಗಿಲ್ಲ. ಅಕ್ಕಪಕ್ಕದ ಗ್ರಾಮಗಳಲ್ಲೂ ಅಭಿವೃದ್ಧಿಯ ಕುರುಹು ಕಾಣುತ್ತಿಲ್ಲ.

ನಾನು ಶಾಸಕ ಆಗಿದ್ದಾಗ ನಾಗಮಂಗಲ ಪಟ್ಟಣ, ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವಾಗಿತ್ತು.
ನಾಗಮಂಗಲದ ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡದೆ ಜನ ಸಾಮಾನ್ಯರ ಕೆಲಸಗಳು ನಡೆಯುತ್ತಿಲ್ಲ.
ಶಾಸಕ ಸುರೇಶಗೌಡ ಕೆಲವೇ ಬೆಂಬಲಿಗರು ಮತ್ತು ಗುತ್ತಿಗೆದಾರರಿಗೆ ಕೆಲಸ ನೀಡಿ, ಕಮೀಷನ್ ಪಡೆಯುತ್ತಿದ್ದಾರೆ.
ನಾಗಮಂಗಲ ಪಟ್ಟಣದ ಸುಭಾಷನಗರದ ಬಡ ಫಲಾನುಭವಿಗಳಿಗೆ ಹಕ್ಕುಪತ್ರ ನೀಡದೆ ಅಲೆಸಲಾಗುತ್ತಿದೆ ಎಂದು ಶಾಸಕ ಸುರೇಶಗೌಡ ವಿರುದ್ಧ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹರಿಹಾಯ್ದಿದ್ದಾರೆ.