ಕೊಪ್ಪಳ: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್(Bhaskar Rao) ಅವರು ಪೊಲೀಸ್ ಇಲಾಖೆಯಲ್ಲಿನ ಕಟುಸತ್ಯವೊಂದನ್ನು ಬಹಿರಂಗ ಪಡಿಸಿದ್ದಾರೆ.
ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಪ್ರತಿದಿನ ಕಲೆಕ್ಷನ್ ಮಾಡಲೇಬೇಕು ಎಂಬ ಸತ್ಯವನ್ನು ಅವರು ಬಾಯಿ ಬಿಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರತಿ ದಿನ ವಸೂಲಿ ಹಣ ಬರದಿದ್ದರೆ, ಪೊಲೀಸರು ಸಂಜೆಯ ವೇಳೆ ಒದ್ದಾಡಿ ಬಿಡುತ್ತಾರೆ ಎಂದು ಹೇಳಿದ್ದಾರೆ.
ಯಾದಗಿರಿಯ ಪಿಎಸ್ ಐ ಪರಶುರಾಮ್ (PSI Parashuram) ಅವರ ಸಾವಿನ ವಿಚಾರವಾಗಿ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಈ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಸರ್ಕಾರದಲ್ಲಿ ಎಲ್ಲಾ ಅಧಿಕಾರಿಗಳು ಒತ್ತಡದಲ್ಲೇ ಕೆಲಸ ಮಾಡಬೇಕು. ಸಿಎಂ ಹಾಗೂ ಗೃಹ ಸಚಿವರು ಕೂಡ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಮೊದಲು ಶಾಸಕರು ಹಾಗೂ ಸಚಿವರು ವರ್ಗಾವಣೆ ವಿಚಾರವಾಗಿ ಮನವಿ ಮಾಡುತ್ತಿದ್ದರು. ಈಗ ಅದು ದಂಧೆಯಾಗಿ ಬಿಟ್ಟಿದೆ ಎಂದು ಹೇಳಿದ್ದಾರೆ.
ಕಲೆಕ್ಷನ್ ದಂಧೆ ಬೇರೂರಿ ಹೆಮ್ಮರವಾಗಿ ಬಿಟ್ಟಿದೆ. ಇದನ್ನು ಸಾಮಾನ್ಯರಿಂದ ಕಂಟ್ರೋಲ್ ಮಾಡೋಕೆ ಆಗದಷ್ಟು ಮಟ್ಟಿಗೆ ಅದು ಬೆಳೆದು ನಿಂತಿದೆ. ಈಗಂತೂ ಅದು ಹೆಮ್ಮರವಾಗಿ ನಿಂತಿದೆ. ರೂಟ್ ಮ್ಯಾಪ್ ಹಾಕಿ ವಸೂಲಿ ದಂಧೆ ಮಾಡಲಾಗುತ್ತದೆ. ಈ ವ್ಯವಸ್ಥೆ ಯಾವಾಗಲೂ ಇದೆ. ನಾನಿದ್ದಾಗಲೂ ಇತ್ತು. ಈಗಲೂ ಇದೆ ಎಂದು ವ್ಯವಸ್ಥೆಯ ಕುರಿತು ಮಾತನಾಡಿದ್ದಾರೆ.