ಸಂಪೂರ್ಣ ಕೋಮಾಕ್ಕೆ ಜಾರಿದ ಮಾಜಿ ರಾಷ್ಟ್ರಪತಿ – ಮತ್ತಷ್ಟು ಬಿಗಡಾಯಿಸಿದೆ ಪ್ರಣಬ್ ಮುಖರ್ಜಿ ಆರೋಗ್ಯ
ಹೊಸದಿಲ್ಲಿ, ಅಗಸ್ಟ್22: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ಅವರು ಸಂಪೂರ್ಣ ಕೋಮಾಕ್ಕೆ ಜಾರಿದ್ದಾರೆ ಎಂದು ದೆಹಲಿಯ ಆರ್ಮಿ ರಿಸರ್ಚ್ ಆಯಂಡ್ ರೆಫೆರಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ ಮೆದುಳಿನಲ್ಲಿ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಮಾಜಿ ರಾಷ್ಟ್ರಪತಿ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟ್ ನೆರವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ಸೋಂಕು ದೃಢಪಟ್ಟಿರುವ ಪ್ರಣಬ್ ಮುಖರ್ಜಿ ಅವರು ಶ್ವಾಸಕೋಶದ ಸೋಂಕಿಗೆ ಕೂಡ ಒಳಗಾಗಿದ್ದಾರೆ.