ಮಾನ್ಸೂನ್ ಅಧಿವೇಶನಕ್ಕೆ ಗೈರುಹಾಜರಿ ರಜೆ ಕೋರಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ

ಮಾನ್ಸೂನ್ ಅಧಿವೇಶನಕ್ಕೆ ಗೈರುಹಾಜರಿ ರಜೆ ಕೋರಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ

ಹೊಸದಿಲ್ಲಿ, ಸೆಪ್ಟೆಂಬರ್‌17: ವೈದ್ಯಕೀಯ ಆಧಾರದ ಮೇಲೆ ಪ್ರಸಕ್ತ ಮಾನ್ಸೂನ್ ಅಧಿವೇಶನಕ್ಕೆ ಗೈರುಹಾಜರಿ ರಜೆ ಕೋರಿರುವ ಒಂದು ಡಜನ್ ಗೂ ಹೆಚ್ಚು ರಾಜ್ಯಸಭಾ ಸಂಸದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದ್ದಾರೆ ಎಂದು ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಬುಧವಾರ ಹೇಳಿದ್ದಾರೆ.

ವೈದ್ಯಕೀಯ ಕಾರಣಗಳಿಗಾಗಿ ಗೈರುಹಾಜರಿ ರಜೆ ಕೋರಿ ಸಿಂಗ್ ಮತ್ತು ಇತರ 13 ಸಂಸದರಿಂದ ಪತ್ರಗಳು ಬಂದಿವೆ ಎಂದು ನಾಯ್ಡು ಸದನಕ್ಕೆ ಮಾಹಿತಿ ನೀಡಿದರು.

ಸಿಂಗ್ ಮತ್ತು ಚಿದಂಬರಂ ಅವರಲ್ಲದೆ, ಪಿಎಂಕೆ ಮುಖಂಡ ಅನ್ಬುಮಣಿ ರಾಮದಾಸ್, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್, ಎಐಎಡಿಎಂಕೆ ನ ನವನೀತಕೃಷ್ಣನ್ ಮತ್ತು ವೈಎಸ್ಆರ್ ಕಾಂಗ್ರೆಸ್ ಮುಖಂಡ ಮತ್ತು ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಸಹಾಯಕ ಪರಿಮಲ್ ನಾಥ್ವಾನಿ, ನಾಮನಿರ್ದೇಶಿತ ಸದಸ್ಯ ನರೇಂದ್ರ ಜಾದವ್, ಹಿಶೆ ಲಾಚುಂಗ್ಪಾ (ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್), ಮನಸ್ ರಂಜನ್ ಭುನಿಯಾ, ಸುಶೀಲ್ ಕುಮಾರ್ ಗುಪ್ತಾ (ಎಎಪಿ), ವಿ ಲಕ್ಷ್ಮೀಕಾಂತ ರಾವ್ (ಟಿಆರ್ಎಸ್), ಮಹೇಂದ್ರ ಪ್ರಸಾದ್ (ಜೆಡಿಯು), ಕೆಜಿ ಕೆನ್ಯೆ (ನಾಗ ಪೀಪನ್ಸ್ ಫ್ರಂಟ್) ಟಿಆರ್ಎಸ್) ಸೇರಿದ್ದಾರೆ. ‌

ನರೇಂದ್ರ ಜಾಧವ್, ಬಂಡಾ ಪ್ರಕಾಶ್ ಮತ್ತು ನವನೀಠಕೃಷ್ಣನ್ ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರು 252 ನೇ ಅಧಿವೇಶನಕ್ಕೆ ಅನುಪಸ್ಥಿತಿಯ ರಜೆ ಕೋರಿದ್ದಾರೆ ಎಂದು ನಾಯ್ಡು ಹೇಳಿದರು.
ಜಾಧವ್ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 1 ರವರೆಗೆ ಗೈರುಹಾಜರಿ ಕೋರಿದ್ದರೆ, ಸೆಪ್ಟೆಂಬರ್ 14 ರಿಂದ 26 ರವರೆಗೆ ಪ್ರಕಾಶ್ ಸದನಕ್ಕೆ ಗೈರುಹಾಜರಾಗಲಿದ್ದಾರೆ. ಸೆಪ್ಟೆಂಬರ್ 14 ರಿಂದ 24 ರವರೆಗೆ ಸದನದ ನಡಾವಳಿಗೆ ನವನೀಠಕೃಷ್ಣನ್ ಹಾಜರಾಗುವುದಿಲ್ಲ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This