ಖ್ಯಾತ ಟೆನಿಸ್ ತಾರೆ ಮರಿಯಾ ಶರಪೋವಾ ತಾಯಿಯಾಗುತ್ತಿದ್ದಾರೆ….
ನಿವೃತ್ತ ಟೆನಿಸ್ ತಾರೆ ಮತ್ತು ಐದು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾ ಅವರು ತಾಯಿಯಾಗುತ್ತಿದ್ದಾರೆ. ತಮ್ಮ 35 ನೇ ಹುಟ್ಟುಹಬ್ಬದಂದು ನಿಶ್ಚಿತ ವರ ಅಲೆಕ್ಸಾಂಡರ್ ಗಿಲ್ಕೆಸ್ ಅವರೊಂದಿಗೆ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶರಪೋವಾ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನೊಂದಿಗೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಾಜಿ ವಿಶ್ವ ನಂ. 1 ಆಟಗಾರ್ತಿ ಬಿಕಿನಿ ಧರಿಸಿ ಸಾಗರದ ತೀರದಲ್ಲಿ ಪೋಟೋಗೆ ಪೋಸ್ ನೀಡಿ ವಿಶೇಷ ದಿನದ ಬಗ್ಗೆ ಹೇಳಿಕೊಂಡಿದ್ದಾರೆ.
https://www.instagram.com/p/CcjQPQ9sn2R/?utm_source=ig_embed&ig_rid=23d3ce19-4c28-462b-a01e-ef1936241706
ಶರಪೋವಾ ಮತ್ತು ಬ್ರಿಟಿಷ್ ಉದ್ಯಮಿ ಗಿಲ್ಕೆಸ್ ಅವರೊಂದಿಗೆ 2018 ರಿಂದ ರಿಲೇಷನ್ ನಲ್ಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಇಬ್ಬರು ತಮ್ಮ ನಿಶ್ಚಿತಾರ್ಥವನ್ನು Instagram ನಲ್ಲಿ ಅನೌನ್ಸ್ ಮಾಡಿದ್ದರು.
“ಶರಪೋವಾ 2020 ರಲ್ಲಿ ಟೆನಿಸ್‌ನಿಂದ ನಿವೃತ್ತರಾದರು, ಕೋವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾಗುವ ಮೊದಲು ತಮ್ಮ ಕೊನೆಯ ವೃತ್ತಿಜೀವನದ ಪಂದ್ಯವನ್ನ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ರೊಯೇಷಿಯಾದ ಡೊನ್ನಾ ವೆಕಿಕ್‌ಗೆ ವಿರುದ್ಧ ಆಡಿ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದರು.