ಬೆಂಗಳೂರಿನಲ್ಲೂ ಜೋರಾದ ಅನ್ನದಾತರ ಹೋರಾಟ: ಟ್ರ್ಯಾಕ್ಟರ್ ಏರಿ ಬಂದ ರೈತರು
ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜದಾನಿಯಲ್ಲಿ ಅನ್ನದಾತರ ಪ್ರತಿಭಟನೆ ಉಗ್ರಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಟ್ರ್ಯಾಕ್ಟರ್ ರ್ಯಾಲಿ ಆರಂಭವಾಗಿದೆ. ಬೆಂಗಳೂರಿನಲ್ಲಿ ಮಹಿಳೆಯರು, ಮಕ್ಕಳ ಜೊತೆಗೂಡಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ರಣಾಂಗಣವಾದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ..!
ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೆಖರ್, ದೇಶದ ಬೆನ್ನೆಲುಬಾದ ಅನ್ನದಾತನಿಗೆ ಮಾರಕವಾದ ಕಾನೂನನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿರುವುದು ಖಂಡನೀಯ. ಪ್ರಧಾನಿ ಮೋದಿ ನೀವು ತೋರ್ಪಡಿಕೆಗೆ ಮಾತ್ರ ದೇಶಪ್ರೇಮಿ. ಒಳಗೆ ದೇಶ ವಿರೋಧಿ. ಚರ್ಚೆ ಮಾಡದೆಯೇ ಕಾನೂನೂ ಜಾರಿಗೆ ತಂದಿರುವುದು ಸೂಕ್ತವಲ್ಲ ಎಂದು ವಾಗ್ದಾಳಿ ನಡೆಸಿದರು. ಸಿಎಂ ಯಡಿಯೂರಪ್ಪ ವಿರುದ್ಧವೂ ಗುಡುಗಿದ ಕೋಡಿಹಳ್ಳಿ, ನೀವು ನಿಜವಾಗಿ ರೈತರ ಪರವಾಗಿದ್ದರೆ ಕೃಷಿ ಕಾಯ್ದೆ, ಜಾನುವಾರು ಕಾಯ್ದೆ ಹಿಂಪಡೆಯಿರಿ. ಇಲ್ಲವಾದಲ್ಲಿ ನಕಲಿ ದೇಶಪ್ರೇಮಿಗಳಿದ್ದಂತೆ ಎಂದು ಹೇಳಿದರು.
ದೆಹಲಿ : ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಪಲ್ಟಿ : ಓರ್ವ ಸಾವು
ರಣಾಂಗಣವಾಯ್ತು ರಾಷ್ಟ್ರ ರಾಜದಾನಿ : ಕೆಂಪುಕೋಟೆ ಪ್ರವೇಶಿಸಿ ಧ್ವಜ ಹಾರಿಸಿದ ರೈತರು : video
ಅನ್ನದಾತರ ಟ್ರ್ಯಾಕ್ಟರ್ ರ್ಯಾಲಿ ತಡೆಯಲು ನಗರದ ಪ್ರಮುಖ ದಿಕ್ಕುಗಳಲ್ಲಿ ‘ಖಾಕಿ ಚಕ್ರವ್ಯೂಹ’
ಪೊಲೀಸರನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು : VIDEO
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel