ದೆಹಲಿಯಲ್ಲಿ ಆಟೋ ಮೇಲೆ ಕಂಟೈನರ್ ಬಿದ್ದು, 4 ಮಂದಿ ಸಾವು…
ದೆಹಲಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಐಟಿಒ ಬಳಿಯ ರಿಂಗ್ ರಸ್ತೆಯಲ್ಲಿ ಆಟೋ ಮೇಲೆ ಕಂಟೈನರ್ ಬಿದ್ದಿದೆ. ಆಟೋದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಕಂಟೈನರ್ ಚಾಲಕ ಪರಾರಿಯಾಗಿದ್ದಾನೆ. ಹತ್ಯೆಗೀಡಾದ ನಾಲ್ವರ ಗುರುತುಗಳು ಇನ್ನಷ್ಟೇ ಪತ್ತೆಯಾಗಬೇಕಿದೆ. ಇದೀಗ ಕಂಟೈನರ್‌ನಿಂದ ದೊರೆತ ದಾಖಲೆಗಳ ಆಧಾರದ ಮೇಲೆ ಅದರ ಮಾಲೀಕರನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಶನಿವಾರ ಮುಂಜಾನೆ ಸೆಂಟ್ರಲ್ ಜಿಲ್ಲೆಯ ಇಂದಿರಾಗಾಂಧಿ ಕ್ರೀಡಾಂಗಣದ ಬಳಿ ಕಂಟೈನರ್ ಟ್ರಕ್ ಪಲ್ಟಿಯಾಗಿ ಆಟೋರಿಕ್ಷಾದ ಮೇಲೆ ಬಿದ್ದ ಪರಿಣಾಮ ಆಟೋರಿಕ್ಷಾ ಚಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರನ್ನು ಆಟೋ ಚಲಾಯಿಸುತ್ತಿದ್ದ ಸುರೇಂದರ್ ಕುಮಾರ್ ಯಾದವ್ ಮತ್ತು ಆತನ ಸೋದರಳಿಯ ಜೈ ಕಿಶೋರ್ ಎಂದು ಪೊಲೀಸರು ಗುರುತಿಸಿದ್ದಾರೆ. ಉಳಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಐ ಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಟ್ರಕ್‌ನಲ್ಲಿ ಅಕ್ಕಿ ತುಂಬಿಕೊಂಡು ಸೋನೆಪತ್‌ನಿಂದ ತುಘಲಕಾಬಾದ್‌ಗೆ ತೆರಳುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಲಾರಿಯ ಚಾಲಕ ಮತ್ತು ಸಹಾಯಕ ತಲೆಮರೆಸಿಕೊಂಡಿದ್ದಾರೆ. ಅವರನ್ನು ಹಿಡಿಯಲು ಬಲೆ ಬೀಸಿದ್ದೇವೆ ಎಂದು ಡಿಸಿಪಿ ಶ್ವೇತಾ ಚೌಹಾಣ್ ಹೇಳಿದ್ದಾರೆ.