ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ..!    – VIDEO VIRAL

1 min read

ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ..!    – VIDEO VIRAL

ಫ್ರಾನ್ಸ್ : ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಅವರಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಲಾಗಿದೆ… ಪ್ರಕರಣ  ಸಂಬಂಧ ಇಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಗ್ನೇಯ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ತಮ್ಮನ್ನ ನೋಡಲು ಸೇರಿದ್ದ ಜನರ ಜೊತೆಗೆ   ಮಾತನಾಡಲು  ಮ್ಯಾಕ್ರನ್ ತಮ್ಮ  ಕಾರಿನಿಂದ ಇಳಿದಿದ್ದರು.  ಈ ವೇಳೆ ಜನಸ್ಥೋಮದದಲ್ಲಿ ಅಡಗಿದ್ದ ದುಷ್ಕರ್ಮಿಯೋರ್ವ  ಏಕಾಏಕಿ  ಮ್ಯಾಕ್ರನ್ ಅವರಿಗೆ ಕಪಾಳಕ್ಕೆ ಹೊಡೆದಿದ್ದಾನೆ.  ಬಳಿಕ ತಕ್ಷಣ ಅಲರ್ಟ್  ಆದ ಭದ್ರತಾ ಸಿಬ್ಬಂದಿ   ಮ್ಯಾಕ್ರನ್ ಅವರ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಕಾಪಾಳ ಮೋಕ್ಷ ಮಾಡಲು ಬಂದಿದ್ದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

ಆಗ್ನೇಯ ಫ್ರಾನ್ಸ್‌ ನ ಡ್ರೋಮ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬ್ಯಾರಿಕೇಡ್ ಗಳಾಚೆ ನಿಂತು ಕೂಗುತ್ತಿದ್ದ ಜನರನ್ನು ಕಂಡು ಅಧ್ಯಕ್ಷ ಮ್ಯಾಕ್ರನ್ ಅವರು ಕಾರನ್ನು ನಿಲ್ಲಿಸಿ ಜನರೊಂದಿಗೆ ಮಾತುಕತೆಗೆ ಮುಂದಾದರು. ಈ ವೇಳೆ ಜನಸ್ಥೋಮದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಧ್ಯಕ್ಷರತ್ತ ನುಗ್ಗಿಬಂದು ಜನರೊಂದಿಗೆ ಹ್ಯಾಂಡ್ ಶೇಕ್ ನಲ್ಲಿ ತೊಡಗಿದ್ದ ಅಧ್ಯಕ್ಷರಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಮ್ಯಾನ್ಮಾರ್ – ಆಂಗ್ ಸಾನ್ ಸೂಕಿ ವಿರುದ್ಧದ ಪ್ರಕರಣಗಳ ವಿಚಾರಣೆ  14ರಿಂದ ಆರಂಭ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd