ಮುಂಬೈ: ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮಲ ಸಹೋದರ ಅರೆಸ್ಟ್ ಆಗಿದ್ದಾನೆ ಎನ್ನಲಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೃನಾಲ್ ಪಾಂಡ್ಯ ಅವರ ಮಲ ಸಹೋದರ ವೈಭವ್ ಪಾಂಡ್ಯ ಎಂಬಾತನನ್ನೇ ಮುಂಬೈ ಪೊಲೀಸರು ಬಂಧಿಸಿದ್ದಾರೆ. 4.3 ಕೋಟಿ ರೂ. ವಂಚಿಸಿರುವುದಾಗಿ ಹಾರ್ದಿಕ್ ಪಾಂಡ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ವೈಭವ್ ಪಾಂಡ್ಯ ಮೂವರು ಸೇರಿ ಸಂಸ್ಥೆ ನಡೆಸುತ್ತಿದ್ದಾರೆ. ಆದರೆ, ವೈಭವ್ ನಷ್ಟ ಮಾಡಿದ್ದಾರೆ ಎಂದು ಪಾಂಡ್ಯ ಆರೋಪಿಸಿದ್ದಾರೆ. ಸಂಸ್ಥೆಯ ಪಾಲುದಾರಿಕೆ ಒಪ್ಪಂದದ ಪ್ರಕಾರ ಪಾಂಡ್ಯ ಬ್ರದರ್ಸ್‌ಗೆ ತಲಾ ಶೇ. 40, ವೈಭವ್‌ಗೆ ಶೇ. 20ಹಂಚಿಕೊಳ್ಳಬೇಕಿತ್ತು. ವೈಭವ್ ಪ್ರತ್ಯೇಕ ಕಂಪನಿಯೊಂದನ್ನು ಸ್ಥಾಪಿಸಿ, ಪಾಂಡ್ಯ ಬ್ರದರ್ಸ್ ಸ್ಥಾಪಿಸಿದ್ದ ಸಂಸ್ಥೆಯ ಹಣವನ್ನು ಅದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಾಂಡ್ಯ ದೂರು ದಾಖಲಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.