ಬೆಂಗಳೂರು: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಪೈನಲ್ ಕಾದಾಟ ನಡೆಯುತ್ತಿದ್ದು, ಭಾರತ ಗೆದ್ದರೆ ಬಿಯರ್ ಉಚಿತ ನೀಡುವ ಆಫರ್ ನೀಡಲಾಗಿದೆ.
2003ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಮುಂದಾಗಿದ್ದು, ಭಾರತ ಗೆಲ್ಲಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ವಿಶೇಷ ಪೂಜೆ, ಹೋಮ, ಹವನ ಮಾಡುತ್ತಿದ್ದಾರೆ. ಇದರ ಮಧ್ಯೆ ಇಲ್ಲೊಬ್ಬ ಕ್ರಿಕೆಟ್ ಅಭಿಮಾನಿ ಭಾರತ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ಹೇಳಿದ್ದಾನೆ.
ಮೈಸೂರಿನಲ್ಲಿ ಭಾರತ ಗೆದ್ದರೆ ಉಚಿತ ಬಿಯರ್ ಆಫರ್ ನೀಡಲು ಮೈಸೂರಿನ ಪೆಗ್ಸ್ ಮತ್ತು ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಮುಂದಾಗಿದೆ. ಫೈನಲ್ ಗೆದ್ದರೆ ಒಂದು ಮಗ್ ಬಿಯರ್ ಫ್ರೀ ನೀಡುವುದಾಗಿ ಘೋಷಿಸಿದೆ. ಹೀಗಾಗಿಯೇ ಹೋಟೆಲ್ ನಲ್ಲಿ ಫೈನಲ್ ಪಂದ್ಯದ ವೀಕ್ಷಣೆಗಾಗಿ ಮೂರು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.