ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಯುನೈಟೆಡ್ ಆಸ್ಪತ್ರೆಯಲ್ಲಿ ಪೋಷಕ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣೆ

Mahesh M Dhandu by Mahesh M Dhandu
November 10, 2021
in Newsbeat, State, ರಾಜ್ಯ
United Hospital saaksha tv
Share on FacebookShare on TwitterShare on WhatsappShare on Telegram

ಯುನೈಟೆಡ್ ಆಸ್ಪತ್ರೆಯಲ್ಲಿ ಪೋಷಕ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣೆ

ಬೆಂಗಳೂರು ನವೆಂಬರ್ 10: ಜಯನಗರದ ಯುನೈಟೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬುಧವಾರ ಪೋಷಕ ಕಲಾವಿದರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

Related posts

swiggy-99-store-affordable-food-delivery-karnataka-news

49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ ’99 ಸ್ಟೋರ್’!

August 14, 2026
shravana-sampath-shukravara-pooja-vidhana

ಶ್ರಾವಣ ಶುಕ್ರವಾರ ಮಹಾಲಕ್ಷ್ಮಿ ಪೂಜೆ: ಸಂಪತ್ ಗೌರಿ ವ್ರತ ಆಚರಿಸುವುದು ಹೇಗೆ? ಇಲ್ಲಿದೆ ಪೂಜಾ ವಿಧಿ ಮತ್ತು ಕಥೆ

August 14, 2026

ಸಾರ್ವಜನಿಕರು, ಮುಖ್ಯವಾಗಿ ಯುವಜನರಲ್ಲಿ ಆರೋಗ್ಯದ ಬಗ್ಗೆ‌‌ ಅರಿವು ಮೂಡಿಸುವುದು ಮತ್ತು ವರ್ಷಕ್ಕೊಮ್ಮೆ ತಪ್ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಂದೇಶ ಕೊಡುವುದು ಈ ಕಾರ್ಯಕ್ರಮದ ಉದ್ದೇಶ.

ಹೀಗಾಗಿ ನಾನಾ ಹಿರಿಯ ಕಲಾವಿದರು, ಪೋಷಕ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಡಾ. ಸಂಜಯ್ ಗೌಡ ಅವರ ನೇತೃತ್ವದಲ್ಲಿ ತಪಾಸಣೆ ಶಿಬಿರ ನಡೆಸಲಾಯಿತು.

ಹಿರಿಯ ಕಲಾವಿದೆ ಆಶಾಲತಾ ಮಾತನಾಡಿ, ಡಾ ಸಂಜಯ್ ಗೌಡ ಮತ್ತು ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶಾಂತಕುಮಾರ್ ಅವರು ಹಿರಿಯ ಕಲಾವಿದರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಒಂದು ಪುಣ್ಯದ ಕೆಲಸ.

ಕಲಾವಿದರು ತಪಾಸಣೆ ಮಾಡಿಸಬೇಕು ಎಂದು ಕೊಂಡರೂ ಎಷ್ಟೋ ಬಾರಿ ಸಾಧ್ಯವೇ ಆಗುವುದಿಲ್ಲ. ಕೆಲವರಿಗೆ ಕೆಲಸದ ಒತ್ತಡ ಇದ್ದರೆ, ಇನ್ನು ಕೆಲವರಿಗೆ ಹಣದ ಸಮಸ್ಯೆಯಿಂದ ತಪಾಸಣೆ ಮಾಡಿಸಿಕೊಳ್ಳಲು ಆಗುವುದಿಲ್ಲ.

ಆದರೆ ಇಂದು ನಮ್ಮ ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್ ಅವರು ನಮ್ಮನ್ನೆಲ್ಲಾ ಒಗ್ಗೂಡಿಸಿ, ಆರೋಗ್ಯ ತಪಾಸಣೆಗೆ ನೆರವಾಗಿದ್ದಾರೆ ಎಂದರು.

ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್ ಮಾತನಾಡಿ, ಹಿರಿಯ ಕಲಾವಿದರಿಗೆ ರಕ್ತ ಪರೀಕ್ಷೆ, ಕೊಲೆಸ್ಟ್ರಾಲ್, ಶುಗರ್, ಇಸಿಜಿ, ಟಿಎಂಟಿ, ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಸಿಟಿ ಎಂಜಿಯೊಗ್ರಾಂ (ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಹಚ್ಚುವ ಪರೀಕ್ಷೆ) ಹೀಗೆ ನಾನಾ ಪರೀಕ್ಷೆಗಳನ್ನು ನಡೆಸಲಾಯಿತು ಎಂದರು.

United Hospital saaksha tv

ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್, ಜಯನಗರದ ಯುನೈಟೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಹಿರಿಯ ಪೋಷಕ ಕಲಾವಿದರಿಗೆ ಆರೋಗ್ಯ ತಪಾಸಣೆ ಮಾಡಿಸಿದುದು ತುಂಬಾ ಖುಷಿಯಾಯಿತು.

ಪ್ರತಿಯೊಂದು ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಟ್ಟರು. ಇದಕ್ಕೆ ಕಾರಣ ಕರ್ತರು ನಮ್ಮ ಕಲಾವಿದರಾದ ಟೆನ್ನಿಸ್ ಕೃಷ್ಣ. ತಪಾಸಣೆಗೊಳಗಾದ ಕಲಾವಿದರಿಗೆ ಗಂಭೀರ ಸಮಸ್ಯೆಗಳಿದ್ದರೆ ಅವರಿಗೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಯವರು ಭರವಸೆ ನೀಡಿದ್ದಾರೆ.

ಇದು ಕೂಡ ನಮಗೆ ತುಂಬಾ ಖುಷಿಯ ವಿಚಾರ. ಇಂದು ಸಾಕಷ್ಟು ಮಂದಿ ತಪಾಸಣೆ ಮಾಡಿಸಿಕೊಂಡೆವು. ಇಂದು ಬರಲು ಸಧ್ಯವಾಗದವರಿಗೆ ಮತ್ತೊಂದು ದಿನ ಶಿಬಿರ ನಡೆಸುವುದಾಗಿ ಆಸ್ಪತ್ರೆಯವರು ಹೇಳಿದ್ದಾರೆ.

ಇದು ಕೂಡ ತುಂಬಾ ಖುಷಿಯ ವಿಚಾರ ಎಂದರು. ನಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಡೀ ದೇಹದ ಆರೋಗ್ಯ ತಪಾಸಣೆ ಮಾಡಿಸುವಂತಹ ಅವಕಾಶ ಸಿಕ್ಕಿದ್ದು ಇದೇ ಮೊದಲು. ಇದಕ್ಕೆ ನಾವೆಲ್ಲಾ ಆಭಾರಿಗಳಾಗಿದ್ದೇವೆ ಎಂದರು.

ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಾಂತಕುಮಾರ್ ಮುರುಡ ಮಾತನಾಡಿ, ಎಲ್ಲರೂ ಆರೋಗ್ಯ ಶಿಬಿರಗಳನ್ನು ಮಾಡುತ್ತಾರೆ. ಆದರೆ ನಾವು ಆರೋಗ್ಯ ಶಿಬಿರ ಮಾಡುತ್ತಿಲ್ಲ.

ಕಲಾವಿದರನ್ನು ಬದುಕಿಸಬೇಕು, ಕಲಾವಿದರನ್ನ ಕಾಪಾಡಬೇಕು ಎಂಬುದು ನಮ್ಮ ಉದ್ದೇಶ.

ಪ್ರತಿಯೊಂದು ಪರೀಕ್ಷೆ ಸಿಟಿ ಸ್ಕ್ಯಾನ್, ಕಿಡ್ನಿ, ಶ್ವಾಸಕೋಶ, ಹೃದಯ, ಕಣ್ಣು ಸೇರಿದಂತೆ ಇಡೀ ದೇಹದ ಎಲ್ಲಾ ಅಂಗಾಂಗಳನ್ನು ಪರೀಕ್ಷಿಸಿ, ಕಲಾವಿದರ ಕೈಗೆ ರಿಪೋರ್ಟ್ ನೀಡಲಾಯಿತು.

ಮೊದಲ ಬಾರಿಗೆ ನಮ್ಮ ಕಡೆಯಿಂದ ಕಲಾವಿದರ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಮಾಡಿದೆವು. ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ನಂತರ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.

ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಲಕ್ಷಾಂತರ ಮಂದಿ ಪೋಷಕ ಕಲಾವಿದರು ನಮಗೆಲ್ಲಾ ಅತ್ಯುತ್ತಮ ಮನರಂಜನೆ ನೀಡಿದ್ದಾರೆ. ಅಂತಹ ಪೋಷಕ ಕಲಾವಿದರಿಗೆ ನಾವೆಲ್ಲಾ ಜತೆಯಾಗಿ, ಒಗ್ಗಟ್ಟಾಗಿರಬೇಕು. ಅವರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ, ಪ್ರತಿಯೊಬ್ಬರ ಜವಾಬ್ದಾರಿ ಎಂದರು.

Tags: #Saaksha TVFree Health CheckupSupporting ArtistsUnited Hospital
ShareTweetSendShare
Join us on:

Related Posts

swiggy-99-store-affordable-food-delivery-karnataka-news

49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ ’99 ಸ್ಟೋರ್’!

by admin
August 14, 2026
0

49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ '99 ಸ್ಟೋರ್'! ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಊಟ ಆರ್ಡರ್...

shravana-sampath-shukravara-pooja-vidhana

ಶ್ರಾವಣ ಶುಕ್ರವಾರ ಮಹಾಲಕ್ಷ್ಮಿ ಪೂಜೆ: ಸಂಪತ್ ಗೌರಿ ವ್ರತ ಆಚರಿಸುವುದು ಹೇಗೆ? ಇಲ್ಲಿದೆ ಪೂಜಾ ವಿಧಿ ಮತ್ತು ಕಥೆ

by admin
August 14, 2026
0

ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ . ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್...

ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿಂದ ಪಡಿತರ ಬಂದ್!

ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿಂದ ಪಡಿತರ ಬಂದ್!

by Shwetha
August 14, 2026
0

ಬೆಂಗಳೂರು: ರಾಜ್ಯದ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅತಿ ಮುಖ್ಯವಾದ ಸೂಚನೆಯೊಂದನ್ನು ನೀಡಿದೆ. ರೇಷನ್ ಕಾರ್ಡ್‌ನಲ್ಲಿ ಹೆಸರಿರುವ...

ರೇಣುಕಾಸ್ವಾಮಿ ಕೊಲೆ ಪ್ರಕರಣ; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣ; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

by Shwetha
August 14, 2026
0

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಇದೀಗ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್‌ರನ್ನು ಮಾಫಿ ಸಾಕ್ಷಿ...

ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣ ನೈಟ್ ಶೋ: ಸರ್ಕಾರ ನಿಮ್ಮದೇ ಇದೆ, ಇಷ್ಟಬಂದಂತೆ ತನಿಖೆ ಮಾಡಿಸಿ- ಪ್ರಜ್ವಲ್ ಜೈಲು ರಂಪಾಟಕ್ಕೆ ಎಚ್‌ಡಿ ರೇವಣ್ಣ ತಿರುಗೇಟು

ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣ ನೈಟ್ ಶೋ: ಸರ್ಕಾರ ನಿಮ್ಮದೇ ಇದೆ, ಇಷ್ಟಬಂದಂತೆ ತನಿಖೆ ಮಾಡಿಸಿ- ಪ್ರಜ್ವಲ್ ಜೈಲು ರಂಪಾಟಕ್ಕೆ ಎಚ್‌ಡಿ ರೇವಣ್ಣ ತಿರುಗೇಟು

by Shwetha
August 14, 2026
0

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನ ಸೆಲ್‌ನಲ್ಲಿ ಆರಾಮವಾಗಿ ಕುಳಿತು ಮೊಬೈಲ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram