ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪುಸ್ತಕ ರಚನಾ ಸಮಿತಿ ಗೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲಾಗಿದೆ..
ನಗರದ ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್ ನಿಂದಾ ಫ್ರೀಡಮ್ ಪಾರ್ಕ್ ವರೆಗೂ ಪ್ರತಿಭಟನಾ ರ್ಯಾಲಿ ನಡೆದಿದೆ..
ಪ್ರತಿಭಟನಾ ರ್ಯಾಲಿ ಯಲ್ಲಿ ಪ್ರಗತಿಪರ ಸಂಘಟನೆಗಳು ಚಿಂತಕರು ಸಾಹಿತಿಗಳು ಕಲಾವಿದರು ತಂತ್ರಜ್ಞರು ಹೋರಾಟಗಾರರು ಭಾಗಿಯಾಗಿದ್ದರು..
ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ.. ಪರಿಷ್ಕೃತ ಪಠ್ಯ ಪುಸ್ತಕ ವಾಪಸ್ ಪಡೆಯಲು ಕನ್ನಡ ಪರ ಸಂಘಟನೆಗಳಿಂದ ಆಗ್ರಹಿಸಲಾಗಿದೆ..
ಪ್ರತಿಭಟನಾ ಸಾ.ರಾ ಗೋವಿಂದ್, ಪ್ರವೀಣ್ ಶೆಟ್ಟಿ, ಜ್ಞಾನ ಪ್ರಕಾಶ ಸ್ವಾಮೀಜಿ, ಸಾಹಿತಿ ಎನ್ ಎಲ್ ಮುಕುಂದ್ ರಾಜ್ ಭಾಗಿಯಾಗಿದ್ದರು..
ಮಾಜಿ ಪರಿಷತ್ ಸದಸ್ಯ ವಿ.ಆರ್ ಸುದರ್ಶನ್, ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ಹಂಸಲೇಖ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು..








